Publish Date: Thu, 11 Jul 2019 (10:00 IST)
Updated Date: Thu, 11 Jul 2019 (10:08 IST)
ಬೆಂಗಳೂರು : ಚಹಾ ಆರೋಗ್ಯಕ್ಕೆ ಒಳ್ಳೆಯದಲ್ಲ ಆದ್ದರಿಂದ ಚಹಾವನ್ನು ಅತಿಯಾಗಿ ಸೇವನೆ ಮಾಡಿದರೆ ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿರುತ್ತದೆ. ಆದರೆ ಈ ಸಮಯದಲ್ಲಿ ಅಪ್ಪಿತಪ್ಪಿಯೂ ಚಹಾವನ್ನು ಸೇವನೆ ಮಾಡಬೇಡಿ ಎಂದು ತಜ್ಞರು ಹೇಳುತ್ತಾರೆ.
ಹೌದು. ಮುಟ್ಟಿನ ಸಂದರ್ಭಗಳಲ್ಲಿ ಕೆಲವು ಆಹಾರಗಳು ನಮ್ಮ ದೇಹ ಪ್ರಕೃತಿಗೆ ಸಂಬಂಧಿಸಿದ ಹಾಗೆ ಸೇವಿಸದೇ ಇದ್ದರೆ ಒಳ್ಳೆಯದು. ಕೆಲವು ಆಹಾರಗಳು ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಋತುಮತಿಯಾದ ದಿನಗಳಲ್ಲಿ ಚಹಾ ಸೇವಿಸದೇ ಇದ್ದರೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ಹೆಚ್ಚಿನ ಹೆಣ್ಣು ಮಕ್ಕಳಿಗೆ ಮುಟ್ಟಿನ ದಿನಗಳಲ್ಲಿ ಬೆನ್ನು, ಸೊಂಟ ನೋವು ಅಥವಾ ಮಾಂಸ ಖಂಡಗಳ ಸೆಳೆತದಂತಹ ಸಮಸ್ಯೆಗಳಿದ್ದೇ ಇರುತ್ತವೆ. ಚಹಾದಲ್ಲಿರುವ ಕಫೈನ್ ಅಂಶ ಈ ನೋವುಗಳನ್ನು ಹೆಚ್ಚಿಸುತ್ತದೆ.