Publish Date: Mon, 24 Jul 2023 (18:20 IST)
Updated Date: Mon, 24 Jul 2023 (18:16 IST)
ಸರ್ಕಾರದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸೋದನ್ನ ಕಂಟ್ರೋಲ್ ಮಾಡೋಕೆ ಕಾಯ್ದೆ ತರ್ತಿವಿ ಎಂದು IT-BT ಸಚಿವರು ಹೇಳಿದ್ದಾರೆ.. ಹಾಗಾದರೆ 40% ಆರೋಪ, ಪೆಸಿಎಂ ಆರೋಪ ಇದ್ಯಾವುದು ಪ್ರೂ ಮಾಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೀವು ಯಾವ ಕಾಯ್ದೆ ಅಡಿ ಬರುತ್ತೀರಿ ಎಂದು ಪ್ರಶ್ನಿಸಿದ್ರು.ಬಿಜೆಪಿ ಇಂದ ಬೆಲೆ ಏರಿಕೆ ಎಂದಿದ್ರು. ಬೆಲೆ ಗಗನಕ್ಕೆ ಹೋಗಿದೆ ಎಂದಿದ್ರಿ.. ಈಗ ಕಾಂಗ್ರೆಸ್ ಸರ್ಕಾರ ಬಂದಿದೆ ಬೆಲೆ ಗಗನ ದಾಟಿ ಹೋಗಿದೆ. ಅದನ್ನು ಕೇಳಿದ್ರೆ ಕೇಂದ್ರ ಕಾರಣ ಅಂತಾರೆ ಎಂದರು. ಸಿದ್ದರಾಮಯ್ಯ ಅವರು ಹೇಳ್ತಾರೆ ಉತ್ತಮ ಬಜೆಟ್ ಮಂಡಿಸಿದ್ದೇನೆ ಅಂತಾ, ಮೊನ್ನೆ 14ನೇ ಬಜೆಟ್‌ಮಂಡಿಸಿದ್ದಾರೆ. ದಲಿತರ ಬಗ್ಗೆ ಬಹಳ ಮಾತಾಡ್ತಾರೆ. ಆದ್ರೆ ನಮಗೆ ತಿಳಿದಂತೆ 14 ಕಾರ್ಯಕ್ರಮಗಳನ್ನ ಕೈ ಬಿಟ್ಟಿದ್ದಾರೆ ಎಂದರು.
geetha
Publish Date: Mon, 24 Jul 2023 (18:20 IST)
Updated Date: Mon, 24 Jul 2023 (18:16 IST)