ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ ಜಿಲ್ಲೆಗಳಲ್ಲಿ ಒಂದೊಂದು ಹಿಂದೂ ಕಾರ್ಯಕರ್ತನ ಸಾವು ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಪಾದಿಸಿದ್ದಾರೆ.
ಕಾರವಾರದ ಶಿರಸಿಯಲ್ಲಿ ಪರೇಶ್ ಮೇಸ್ತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆಯೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸತ್ತ ದಿನವೇ ಮುಖ್ಯಮಂತ್ರಿಗಳು ಮಂಗಳೂರಿಗೆ ಹೋಗಿದ್ದರು ಎಂದು ತಿಳಿಸಿದ್ದಾರೆ.
ಈಗ ಡಿಸೆಂಬರ್ 7ರಂದು ಹೊನ್ನಾವರ, ಭಟ್ಕಳಕ್ಕೆ ಸಿಎಂ ಹೋಗಿದ್ದರು. 8 ರಂದು ಬೆಳಗ್ಗೆ ಪರೇಶ್ ಮೇಸ್ತಾ ಸಾವು ಕಂಡಿದ್ದಾರೆ. ಹೀಗೆ ಮುಖ್ಯಮಂತ್ರಿ ಯಾವ್ಯಾವ ಜಿಲ್ಲೆಗೆ ಹೋಗ್ತಾರೋ, ಅಲ್ಲಿ ಒಂದು ಹಿಂದೂ ಕಾರ್ಯಕರ್ತನ ಜೀವ ಉರುಳುತ್ತೆ ಎಂಬುದು ಹಲವಾರು ಕೊಲೆ ಪ್ರಕರಣಗಳ ಮೂಲಕ ಸಾಬೀತಾಗಿದೆ ಎಂದು ಆರೋಪಿಸಿದ್ದಾರೆ.
ಪರೇಶ್ ಮೇಸ್ತಾ ಕೊಲೆ ಪ್ರಕರಣವನ್ನು ಮುಚ್ಚಿಹಾಕುವಂತಹ ಷಡ್ಯಂತ್ರವನ್ನು ಮುಖ್ಯಮಂತ್ರಿಯವರು ಮಾಡುತ್ತಿದ್ದಾರೆ.
ಮುಸಲ್ಮಾನರು ದೇಶದ್ರೋಹ ಚಟುವಟಿಕೆ ನಡೆಸುತ್ತಿದ್ದರೂ, ಆಯುಧಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದರೂ ಕೂಡ ಸರ್ಕಾರ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳೂತ್ತಿಲ್ಲ. ಆದರೆ, ಅರ್ಧರಾತ್ರಿ ವೇಳೆಯಲ್ಲಿ ಹಿಂದೂಗಳ ಮನೆಗೆ ನುಗ್ಗಿ ಅವರನ್ನು ಬಂಧಿವ ಕೆಲಸವನ್ನು ಹೊನ್ನಾವರದಲ್ಲಿ ಮಾಡಿದೆ ಎಂದು ದೂರಿದ್ದಾರೆ.
ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಜಿಹಾದಿಗಳಿಗೆ, ಪಿಎಫ್ ಐ ಕಾರ್ಯಕರ್ತರಿಗೆ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಆದ್ದರಿಂದ ಪರೇಶ್ ಮೇಸ್ತಾ ಅವರ ಕೊಲೆ ಪ್ರಕರಣವನ್ನು ಎನ್‍ಐಎ ಅಥವಾ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಪರೇಶ್ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.