ಕೆಜಿಎಫ್ ಚಿತ್ರದಲ್ಲಿ ತೋರಿಸಿರುವಂತೆ ಜೀತ ಪದ್ಧತಿ ಈಗಲೂ ನಮ್ಮಲ್ಲಿ ಜಾರಿಯಲ್ಲಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಕೊಪ್ಪಳದಲ್ಲಿ ಜೀತ ಪದ್ಧತಿ ಇನ್ನೂ ಜೀವಂತವಾಗಿದೆ. ಓರಿಸ್ಸಾ ಮೂಲದ 45 ಜೀತ ಕಾರ್ಮಿಕರನ್ನು ಪತ್ತೆ ಮಾಡಿದೆ ಕೊಪ್ಪಳ ಜಿಲ್ಲಾಡಳಿತ. 45 ಜೀತ ಕಾರ್ಮಿಕರ ಜೊತೆಗೆ 13 ಮಕ್ಕಳು ಪತ್ತೆಯಾಗಿದ್ದಾರೆ.
ಕೊಪ್ಪಳ ತಾಲೂಕು ಗಿಣಿಗೇರ ಗ್ರಾಮದಲ್ಲಿ ಇಟ್ಟಂಗಿ ಭಟ್ಟಿಯಲ್ಲಿ ಜೀತಕ್ಕೆ ಇಟ್ಟುಕೊಂಡಿದ್ದ ಮಾಲೀಕ. ಕೆಜಿಎಫ್ ಚಿತ್ರದ ಮಾದರಿಯಂತೆ ಕಾರ್ಮಿಕರಿಗೆ ಹೊರ ಜಗತ್ತಿನ ಸಂಪರ್ಕವೇ ಇಲ್ಲದಂತೆ ಮಾಡಿದ್ದನು. ಮಾಲೀಕ ರಮೇಶ ಯೆಲ್ಲೂರ ವಿರುದ್ಧ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.