Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಾರಿಗುಡಿಗುಡ್ಡದಲ್ಲಿನ ಬೆಂಕಿಗೆ ಹಾನಿಯಾಗಿದ್ದೇನು?

ಮಾರಿಗುಡಿಗುಡ್ಡದಲ್ಲಿನ ಬೆಂಕಿಗೆ ಹಾನಿಯಾಗಿದ್ದೇನು?
ಚಾಮರಾಜನಗರ , ಭಾನುವಾರ, 20 ಜನವರಿ 2019 (16:28 IST)
ಮಾರಿಗುಡಿಗುಡ್ಡ ಮತ್ತು ಗುಡ್ಡೆಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಮಾರಿಗುಡಿಗುಡ್ಡ ಮತ್ತು ಗುಡ್ಡೆಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ತಡರಾತ್ರಿ ನಡೆದಿದೆ. ಬೆಂಕಿಗೆ ಎಕರೆಗಟ್ಟಲೇ ಕಾಡು ಸುಟ್ಟು ಭಸ್ಮವಾಗಿದೆ.
ಗಾಳಿಯ ರಭಸಕ್ಕೆ  ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಹರಡಿ ಎಕರೆಗಟ್ಟಲೇ ಕಾಡು ನಾಶವಾಗಿದೆ.  

ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಬೆಂಕಿ ವಾಚರ್ ಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಕಿಡಿಗೇಡಿಗಳ ಕೃತ್ಯವೇ ಇಲ್ಲವೆ ಅಗ್ನಿ ಆಕಸ್ಮಿಕವೇ ಎಂಬುದು ತನಿಖೆ ನಂತರ ತಿಳಿಯಲಿದೆ. 

ಕಳೆದ ಒಂದು ವಾರದ ಹಿಂದೆಯಷ್ಟೇ ಸೂಕ್ಷ್ಮ ಅರಣ್ಯ ವಲಯವಾದ  ಮೇಲುಕಾಮನಹಳ್ಳಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿತ್ತು.




Share this Story:

Follow Webdunia kannada

ಮುಂದಿನ ಸುದ್ದಿ

ಈಗಲ್ಟನ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಕೈ ಶಾಸಕರು ಇಂದು ಸಂಜೆ ವಾಪಾಸ್