Publish Date: Sat, 20 Jul 2019 (14:33 IST)
Updated Date: Sat, 20 Jul 2019 (14:34 IST)
ಹಾಳಾಗಿದ್ದ ಪುಷ್ಕರಣಿಯತ್ತ ಇದೀಗ ಅಲ್ಲಿನ ಆಡಳಿತ ತಿರುಗಿ ನೋಡಿದೆ. ಪರಿಣಾಮ ಪುಷ್ಕರಣಿ ಜೀರ್ಣೋದ್ಧಾರಗೊಳ್ಳುತ್ತಿದೆ.
ಬತ್ತಿದ ಪುಷ್ಕರಣಿಯ ಸ್ವಚ್ಛತೆಗೆ ನಗರಸಭೆ ಮತ್ತು ಜಿಲ್ಲಾಡಳಿತ ಮುಂದಾಗಿದೆ.
ಚಿತ್ರದುರ್ಗದ ನಗರ ಮಧ್ಯದಲ್ಲಿನ ಕೆಂಚಮಲ್ಲಪ್ಪನ ಬಾವಿಯನ್ನು ಸ್ವಯಂ ಸೇವಕ ಸಂಘದ ಜೊತೆಗೂಡಿ ಸ್ವಚ್ಛತೆಯನ್ನು ಮಾಡಲಾಯಿತು.
ನಗರಸಭೆಯ ವತಿಯಿಂದ ನಡೆದ ಈ ಕೆಲಸಕ್ಕೆ ಶಾಲಾ ವಿದ್ಯಾರ್ಥಿಗಳು ಶ್ರಮದಾನ ಮಾಡಿದ್ರು. ಮಳೆಯ ಕೊರತೆಯಿಂದ ಪುಷ್ಕರಣಿಯು ಬತ್ತಿದ್ದು ಕಸ ತುಂಬಿಕೊಂಡಿತ್ತು.
ಸುತ್ತಲಿನ ಜನರಿಗೆ ಇದರಿಂದ ದುರ್ವಾಸಸೆ ಆರಂಭವಾಗಿತ್ತು. ಈ ಹಿನ್ನಲೆಯಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ.