ಯಾದಗಿರಿ: ಗುಜರಾತ್ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ 'ಇದು ನನ್ನ ರಾಜ್ಯ, ನನ್ನ ಮರ್ಯಾದೆ ಉಳಿಸಿ' ಎಂದ ಮೋದಿ ಭಾಷಣ ಮಾಡಿದ್ರು, ಇದು ಕೆಲಸ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಯಾದಗಿರಿಯಲ್ಲಿ ಹೇಳಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ನಮಗೆ ಹೆಚ್ಚಿನ ಸೀಟು ಸಿಕ್ಕಿದೆ. ರಾಹುಲ್ ನಾಯಕತ್ವಕ್ಕೆ ಬೆಂಬಲ ವ್ಯಕ್ತವಾಗಿದೆ. ಫಲಿತಾಂಶ ನೋಡಿದರೆ ನಾವು ಗೆದ್ದು ಸೋತಂತೆ ಅನಿಸುತ್ತೆ. ಈ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರುವುದಿಲ್ಲ, ಅಮಿತ್ ಶಾ, ಮೋದಿ ತಂತ್ರಗಾರಿಕೆ ಇಲ್ಲಿ ನಡೆಯಲ್ಲ. ಇದು ಶರಣರ ನಾಡು ಇಲ್ಲಿ ಕೋಮುವಾದ ನಡೆಯಲ್ಲ, ರಾಜ್ಯದಲ್ಲಿ ಗೆದ್ದು ರಾಹುಲ್ ಗೆ ಮೊದಲ ಉಡುಗೊರೆ ಕೊಡುತ್ತೇವೆ ಎಂದ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.