ಸಚಿವ ಕೆ.ಎಸ್. ಈಶ್ವರಪ್ಪ ಅವರ ಬಂಧನಕ್ಕೆ ಆಗ್ರಹಿಸಿ ಮತ್ತು ರಾಜ್ಯ ಸರ್ಕಾರದ 40% ಕಮಿಷನ್ ಹಗರಣದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಜನಜಾಗೃತಿ ಪ್ರತಿಭಟನಾ ಕಾರ್ಯಕ್ರಮ ಮುಂದುವರಿದಿದೆ. ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಚಿಕ್ಕೋಡಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ನಂತ್ರ ಮಾಧ್ಯದವರೊಂದಿಗೆ ಮಾತಾಡಿದ ಎಂಬಿ ಪಾಟೀಲ್, ರಾಜ್ಯದಲ್ಲಿ 40% ಕಮಿಷನ್ ಸರ್ಕಾರದ ಇದೆ. ಕಾಂಗ್ರೆಸ್ ಪಕ್ಷ ಹೋರಾಟ ಮಾಡಿದ ಮೇಲೆ ಈಶ್ವಪ್ಪನವರು ರಾಜೀನಾಮೆ ಸಲ್ಲಿಸಿದ್ದಾರೆ. ಈಶ್ವಪ್ಪನವರ ರಾಜೀನಾಮೆ ನಮ್ಮ ಮುಖ್ಯ ಉದ್ದೇಶ ಅಲ್ಲ, ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಬೇಕು. ಮೋದಿಯವರು ನಾ ಖಾವುಂಗಾ ನಾ ಖಾನೇದೂಂಗಾ ಅಂತಾ ಹೇಳಿದ್ದಾರೆ. ಅವರದ್ದೇ ಕಾರ್ಯಕರ್ತ ಸಂತೋಷ್ 40% ಕಮಿಷನ್ ಬಗ್ಗೆ ಸಾಕಷ್ಟು ಪತ್ರಗಳನ್ನು ಬರೆದಿದ್ದರು. ಚೌಕಿದಾರ್ ಮೋದಿ ಈಗ ಏನು ಮಾಡ್ತಾ ಇದ್ದಾರೆ ಎಂದು ಪ್ರಶ್ನಿಸಿದ್ದಾರೆ.