Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ವಕ್ಷೇತ್ರದಲ್ಲಿ ಸಿಎಂ ಕುಮಾರಸ್ವಾಮಿ ಮಾಡ್ತಿರೋದೇನು?

ಸ್ವಕ್ಷೇತ್ರದಲ್ಲಿ ಸಿಎಂ ಕುಮಾರಸ್ವಾಮಿ ಮಾಡ್ತಿರೋದೇನು?
ರಾಮನಗರ , ಮಂಗಳವಾರ, 18 ಜೂನ್ 2019 (15:36 IST)
ಮೈತ್ರಿ ಸರಕಾರ ಹಾಗೂ ಆಪರೇಷನ್ ಕಮಲದ ಸುದ್ದಿ ಹರಿದಾಡುತ್ತಿರುವಾಗಲೇ ಸಿಎಂ ಸ್ವಕ್ಷೇತ್ರದತ್ತ ಚಿತ್ತ ಹರಿಸಿದ್ದಾರೆ.

ರಾಮನಗರದಲ್ಲಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ, ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಸುಮಾರು 540 ಕೋಟಿ ರೂ. ವೆಚ್ಚದ ಯೋಜನೆಗೆ  ಕಣ್ವಾ ಜಲಾಶಯ ಬಳಿ ಗುದ್ದಲಿ ಪೂಜೆ ನೆರವೇರಿಸಿದರು.

 ಚನ್ನಪಟ್ಟಣ, ಮಾಗಡಿ, ರಾಮನಗರ, ಕನಕಪುರ ತಾಲ್ಲೂಕಿನ ಎಲ್ಲ ಹಳ್ಳಿ ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಸತ್ತೇಗಾಲ ಸಮೀಪದಲ್ಲಿ ಕಾವೇರಿ ನದಿಯಿಂದ ಇಗ್ಗಲೂರು ಹೆಚ್. ಡಿ. ದೇವೇಗೌಡ ಬ್ಯಾರೆಜ್ ಗೆ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಸುವ ಯೋಜನೆ ಇದಾಗಿದೆ.

ಕಾವೇರಿ ನದಿಯಿಂದ 210 ಕ್ಯೂಸೆಕ್  ನೀರನ್ನು  ಈ ಮಹಾತ್ವಾಂಕ್ಷಿ ಯೋಜನೆಯಡಿ ಪೈಪಗಳ ಮೂಲಕ ನೀರನ್ನು ಇಗ್ಗಲೂರು, ಕಣ್ವಾ, ವೈಜಿ ಗುಡ್ಡ, ಮಂಚನಬೆಲೆ  ಜಲಾಶಯಗಳಿಗೆ ತುಂಬಿಸಲಾಗುವುದು.

ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಜಿಂದಾಲ್ ಪ್ರಕರಣ: ಬಿಜೆಪಿ ಪಾದಯಾತ್ರೆಗೆ ಶಾಮನೂರು ಕಿಡಿ