ದಂಪತಿ ಬೆಡ್ ರೂಮಿನಲ್ಲಿ ಗಾಢನಿದ್ರೆಯಲ್ಲಿದ್ದಾಗ ನಡೆಯಬಾರದ ಅನಾಹುತ ನಡೆದುಹೋಗಿದೆ.
ಕಳ್ಳರು ತಮ್ಮ ಕೈ ಚಳಕ ತೋರಿದ್ದು ಮನೆಯಲ್ಲಿ ಮಲಗಿದ್ದ ದಂಪತಿಗೆ ಗೊತ್ತಾಗದಂತೆ ಲಕ್ಷ ಲಕ್ಷ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.
ಕಲಬುರಗಿ ನಗರದ ಹಳೇ ಜೇವರ್ಗಿ ರಸ್ತೆಯಲ್ಲಿರುವ ಶಾಸ್ತ್ರಿ ನಗರದಲ್ಲಿ ನಸುಕಿನ ಜಾವದಲ್ಲಿ ಎರಡು ಮನೆಗಳಲ್ಲಿ ಕಳ್ಳತನವಾಗಿವೆ. 400 ಗ್ರಾಮ್ ಚಿನ್ನಾಭರಣ ಹಾಗೂ 4.23 ಲಕ್ಷ ರೂ.ಗಳನ್ನು ಕದ್ದು ಕಳ್ಳರು ಪಲಾಯನಗೈದಿದ್ದಾರೆ.
ಬೆಡ್ ರೂಮಿನಲ್ಲಿ ಗಾಢನಿದ್ರೆಯಲ್ಲಿದ್ದ ಕಿರಾಣಿ ಅಂಗಡಿ ವ್ಯಾಪಾರಿ ವಿಜಯಕುಮಾರ ಗೋಲೆ ಎಂಬುವರ ಮನೆಯಲ್ಲಿ 40 ತೊಲೆ ಚಿನ್ನಾಭರಣ ಹಾಗೂ 4 ಲಕ್ಷ ನಗದನ್ನು ಕಳ್ಳತನ ಮಾಡಲಾಗಿದೆ.
ವಿಜಯಕುಮಾರ ಗೋಲೆ ಮನೆ ಪಕ್ಕದಲ್ಲಿರುವ ಶರಣಪ್ಪ ಎನ್ನುವವರ ಮನೆಯಲ್ಲಿ ಪ್ಯಾಂಟಿನ ಜೇಬಿನಲ್ಲಿದ್ದ 23 ಸಾವಿರ ರೂಪಾಯಿ ನಗದಿನೊಂದಿಗೆ ಕಳ್ಳರು ತಮ್ಮ ಕೈಚಳಕ ತೋರಿ ಓಡಿಹೋಗಿದ್ದಾರೆ.
ಕಲಬುರಗಿ ಜಿಲ್ಲೆಯ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಪಿಎಸ್ ಐ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.