Publish Date: Thu, 14 Mar 2019 (16:35 IST)
Updated Date: Thu, 14 Mar 2019 (16:37 IST)
ಸುಮಲತಾರನ್ನು ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು. ಆದರೆ ಹೆಚ್ಡಿಕೆ-ಸುಮಲತಾ ನಡುವೆ ಏನು ನಡೆದಿದೆಯೋ ಎಂದು ಸಚಿವರೊಬ್ಬರು ಹೇಳಿದ್ದು ಕುತೂಹಲ ಕೆರಳಿಸಿದೆ.
ಸಂಧಾನಕ್ಕೆ ಸುಮಲತಾ ಅವರೇ ಒಪ್ಪಲಿಲ್ಲ. ಸುಮಲತಾರನ್ನೇ ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ನನಗಿತ್ತು.
ಜೆಡಿಎಸ್ ವರಿಷ್ಠರನ್ನ ಭೇಟಿ ಮಾಡಿಸುವ ಯತ್ನ ಮಾಡಿದ್ದೆ. ಸಂಬಂಧಿ ಮಧು ಮೂಲಕ ಮಾಡಿದ ಪ್ರಯತ್ನ ವಿಫಲವಾಯ್ತು. ಹೀಗಂತ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.
ಸಂಧಾನಕ್ಕೆ ನಾನು, ನನ್ನ ಮಗ ಸಕಲ ಪ್ರಯತ್ನ ಮಾಡಿದೆವು. ಸಂಧಾನಕ್ಕೆ ಸುಮಲತಾ ಅವರೇ ಒಪ್ಪಲಿಲ್ಲ ಅಂತ
ಮಂಡ್ಯದ ಮದ್ದೂರಿನಲ್ಲಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ಹೆಚ್ಡಿಕೆ-ಸುಮಲತಾ ನಡುವೆ ಏನು ನಡೆದಿದೆಯೋ ನನಗೆ ಗೊತ್ತಿಲ್ಲ. ಹೀಗಾಗಿ ಹೆಚ್ಡಿಕೆ ಮೇಲೆ ಒತ್ತಡ ಹೇರಲಿಲ್ಲ.
ಭೇಟಿಯಾಗಿ, ನಾನೇ ಅಭ್ಯರ್ಥಿ ಆಗ್ತೀನಿ ಟಿಕೆಟ್ ಕೊಡಿ ಅಂತಾ ಕೇಳಬೇಕಿತ್ತು. ಆದರೆ ಭೇಟಿಯಾಗೋಕೆ ಅವರೇ ಒಪ್ಪಲಿಲ್ಲ ಅಂತಾನೂ ಸಚಿವರು ಹೇಳಿದ್ದಾರೆ.