ಬೆಂಗಳೂರು : ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ‘ಕುಮಾರ ಉದ್ಯೋಗ’ ಎಂಬ ಆ್ಯಪ್ ವೊಂದನ್ನು ಬಿಡುಗಡೆ ಮಾಡಿದ್ದು, ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬಕ್ಕೆ ಕರ್ನಾಟಕದ ಯುವಕರಿಗೆ ತನ್ನದೊಂದು ಸಣ್ಣ ಉಡುಗೊರೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಆ್ಯಪ್ ಮೂಲಕ ಕರ್ನಾಟಕದ ನಿರುದ್ಯೋಗಿಗಳಿಗೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವ ಭರವಸೆಯನ್ನು ನೀಡಿದೆ. ಸಾಮಾಜಿಕ ತಾಣಗಳಲ್ಲಿ ಈ ಸುದ್ದಿ ರವಾನೆಯಾಗುತ್ತಿದ್ದಂತೆ ಒಂದು ಗಂಟೆಯೊಳಗೆ ಎಂಟು ಸಾವಿರ ಮಂದಿ ನೋಂದಾವಣೆ ಮಾಡಿದ್ದಾರೆ.
ನೋಂದಾವಣೆಯ ಬಗ್ಗೆ ಮಾಹಿತಿ ಕೂಡ ನೀಡಿದ್ದು, ಅದು ಹೀಗಿದೆ, ನಿರುದ್ಯೋಗಿಗಳು “ಕುಮಾರ ಉದ್ಯೋಗ “ ಎನ್ನುವ ಅಂಡ್ರಾಯ್ಡ ಅಪ್ಲಿಕೇಶನ್ ಅನ್ನು ಗೂಗಲ್ ಅಂಡ್ರಾಯ್ಡ ಪ್ಲೇಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಂಡು ತಮ್ಮ ವಿದ್ಯಾರ್ಹತೆ ಸಮೇತ ಮಾಹಿತಿ ಸಲ್ಲಿಸಬೇಕು. ಈ ಮಾಹಿತಿಯನ್ನು ಪಡೆದು 2018 ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸರ್ಕಾರಿ/ ಖಾಸಗಿ ಕಂಪೆನಿಗಳ ಜೊತೆ ಚರ್ಚಿಸಿ ವಿವರ ಸಲ್ಲಿಸಿದ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ