Publish Date: Thu, 22 Nov 2018 (20:27 IST)
Updated Date: Thu, 22 Nov 2018 (20:29 IST)
ಆ ಜಿಲ್ಲೆಯಲ್ಲಿನ ಸುಪ್ರಸಿದ್ಧ ದೇವಾಲಯಕ್ಕೆ ನೂರಾರು ಜನರು ನಿತ್ಯ ಭೇಟಿ ನೀಡಿ, ದರ್ಶನ ಪಡೆದುಕೊಳ್ಳುತ್ತಾರೆ. ಆದರೆ ಅದೇ ದೇವಸ್ಥಾನದಲ್ಲಿ ನಡೆಯಬಾರದ್ದು ನಡೆದುಹೋಗಿದೆ.
ಕೋಲಾರ ಜಿಲ್ಲೆಯ ಸುಪ್ರಸಿದ್ಧ ಕೊಲದೇವಿ ಗರುಡ ದೇವಾಲಯದಲ್ಲಿ ಕಳ್ಳತನ ನಡೆದಿದೆ. ಕೋಲಾರದ ಮುಳಬಾಗಿಲು ತಾಲೂಕಿನ ಕೊಲದೇವಿ ಗ್ರಾಮದಲ್ಲಿರುವ ಗರುಡ ದೇವಾಲಯದಲ್ಲಿ ಕಳ್ಳತನವಾಗಿದೆ. ದೇವಾಲಯದ ಹಿಂಬದಿ ಗೋಡೆ ಕೆಡವಿ ದೇವಾಲಯದಲ್ಲಿದ್ದ ಹುಂಡಿ ಕಳ್ಳತನ ಮಾಡಲಾಗಿದೆ.
ಹುಂಡಿಯಲ್ಲಿದ್ದ ಸಾವಿರಾರು ರೂಪಾಯಿ ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Jagadeesh
Publish Date: Thu, 22 Nov 2018 (20:27 IST)
Updated Date: Thu, 22 Nov 2018 (20:29 IST)