ಬೆಂಗಳೂರು : ಹಿಂದೂ ನಾಯಕರ ಹತ್ಯೆಗೆ ಮುಂದಾದ ಸಮಾಜದ್ರೋಹಿಗಳು ಯಾರೇ ಆಗಲಿ ಅವರನ್ನು ಯಾರೂ ಕೂಡ ಬೆಂಬಲಿಸಲ್ಲ ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಪೌರತ್ವ ಕಾಯ್ದೆ ಜನಜಾಗೃತಿ ವೇಳೆ ಹಿಂದೂ ಮುಖಂಡರಾದ ಸಂಸದ ತೇಜಸ್ವಿ ಸೂರ್ಯ ಹಾಗೂ ಸೂಲಿಬೆಲೆ ಹತ್ಯೆಗೆ ಡಿ.22ರಂದು ಟೌನ್ ಹಾಲ್ ಬಳಿ ಪ್ಲ್ಯಾನ್ ನಡೆದಿತ್ತು ಎಂಬ ವಿಚಾರ ಸಿಎಎ ಪರವಾಗಿದ್ದ ವರುಣ್ ಎಂಬಾತನ ಮೇಲೆ ಹಲ್ಲೆ ಮಾಡಿದ ಎಸ್ ಡಿಪಿಐ ಕಾರ್ಯಕರ್ತರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಈ ಸ್ಫೋಟಕ ಮಾಹಿತಿ ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿದ ಯುಟಿ ಖಾದರ್, ಎಸ್ ಡಿಪಿಐ ಕಾರ್ಯಕರ್ತರ ಬಂಧನವಾಗಿರುವುದು ಸರಿಯಾದ ಕ್ರಮ. ಕಾನೂನು ಎಲ್ಲರಿಗೂ ಒಂದೇ ಪ್ರತಿಯೊಬ್ಬರ ಜೀವ ಮೌಲ್ಯಯುತ ಎಂಬುದನ್ನು ಸರ್ಕಾರ ಕೂಡ ಅರ್ಥಮಾಡಿಕೊಳ್ಳಬೇಕು ಎಂದರು. ಹಾಗೇ , ಎಸ್ ಡಿಪಿಐ ನಿಷೇಧಿಸುವ ಬಗ್ಗೆ ಸರ್ಕಾರವೇ ನಿರ್ಧಾರ ಮಾಡಬೇಕು ಎಂದು ತಿಳಿಸಿದ್ದಾರೆ.