Publish Date: Wed, 24 Jul 2019 (16:00 IST)
Updated Date: Wed, 24 Jul 2019 (16:02 IST)
ಆ ಚಟಕ್ಕಾಗಿ ಅವರಿಬ್ಬರೂ ಮಾಡಬಾರದ ಕೆಲಸ ಮಾಡಿ ಪೊಲೀಸರ ಕೈಗೆ ಸಿಕ್ಕುಹಾಕಿಕೊಂಡಿದ್ದಾರೆ.
ಗಾಂಜಾ ಚಟಕ್ಕೆ ಅಂಟಿಕೊಂಡಿದ್ದ ಖದೀಮರು ಸಿಕ್ಕ ಸಿಕ್ಕವರ ಬೈಕ್ ಗಳನ್ನು ಕದಿಯುತ್ತಿದ್ದರು. ಈ ಕಿಲಾಡಿ ಕಳ್ಳರನ್ನು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ ಯಲಹಂಕ ಉಪನಗರ ಠಾಣೆಯ ಪೊಲೀಸರು.
ಗಾಂಜಾ ಚಟಕ್ಕೆ ದಾಸರಾಗಿದ್ದ ದರ್ಶನ್ ಹಾಗೂ ಲಕ್ಷ್ಮಣ್ ಉರ್ಫ್ ಸೀನ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 20 ಕ್ಕೂ ಹೆಚ್ಚು ಬೈಕ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಲಬುರಗಿ ಮೂಲದ ಲಕ್ಷ್ಮಣ ಉರ್ಫ್ ಸೀನನ ಜತೆಗೂಡಿ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಬಿಟ್ಟಿದ್ದ ದರ್ಶನ್ ಸೇರಿಕೊಂಡು ಬೈಕ್ ಕಳ್ಳತನ ಮಾಡುತ್ತಿದ್ದರು.
ಬೆಂಗಳೂರಿನ ಆರ್ ಟಿ ನಗರ, ಬಿಡದಿ, ಹೆಚ್ ಎಎಲ್ ಮೊದಲಾದ ಕಡೆಗಳಲ್ಲಿ ಈ ಖದೀಮರು ಬೈಕ್ ಗಳನ್ನು ಕದಿಯುತ್ತಿದ್ದರು.