ತನ್ನ ತಾಯಿಯೊಂದಿಗೆ ಅಕ್ರಮ ಸಂಬಂಧದಲ್ಲಿ ಇದ್ದವನಿಗೆ ಮಗನೊಬ್ಬ ಮಾಡಬಾರದ್ದನ್ನು ಮಾಡಿದ್ದಾನೆ.
ತನ್ನ ತಾಯಿಯೊಂದಿಗೆ 28 ವರ್ಷದ ನಾಗರಾಜ್ ಎಂಬಾತ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಮಹಿಳೆಯ ಮಗ ನಾಗರಾಜ್ ನನ್ನು ಕೊಲೆ ಮಾಡಿದ್ದಾನೆ.
ತನ್ನ ಸ್ನೇಹಿತನ ಜೊತೆ ಸೇರಿ ತನ್ನ ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ನಾಗರಾಜ್ ನನ್ನು ಮಹಿಳೆಯ ಮಗ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಮಂಡ್ಯದ ಕೆ.ಆರ್.ಎಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಹಿಳೆಯ ಮಗ ಸತೀಶ್ ಹಾಗೂ ಆತನ ಗೆಳೆಯ ರಂಜಿತ್ ನನ್ನು ಬಂಧಿಸಲು ಪೊಲೀಸರು ಶೋಧ ಕೈಗೊಂಡಿದ್ದಾರೆ.