ಮೆಗಾಫೈಟ್ ಗೆ ವೇದಿಕೆಯಾಗಿ ದೇಶದ ಗಮನ ಸೆಳೆದಿದ್ದ ಮಂಡ್ಯದಲ್ಲಿ ಈಗ ಹೊಸ ಸಮಸ್ಯೆಗಳೇ ತಾಂಡವವಾಡುತ್ತಿವೆ.
ಮಂಡ್ಯದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕಬ್ಬಿನ ಬಾಕಿ ಪಾವತಿಯಾಗದ ಹಿನ್ನೆಲೆ
ದೇಶಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಗಿದೆ.
ಮದ್ದೂರು ತಾಲ್ಲೂಕಿನ ದೇಶಹಳ್ಳಿ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕಬ್ಬಿನ ಬಾಕಿ ಪಾವತಿ ಮಾಡದ NSL ಶುಗರ್ ಕಂಪನಿ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಕೈಯಲ್ಲಿ ಕಬ್ಬು ಹಾಗೂ ಮಣ್ಣು ಹಿಡಿದು ರೈತರು ಕಿಡಿಕಾರಿದ್ರು.
ಕಬ್ಬು ಪೂರೈಕೆ ಮಾಡ್ತಿರೋ ರೈತ್ರಿಗೆ ಬಾಕಿ ಪಾವತಿ ಮಾಡದೆ ಬಾಯಿಗೆ ಮಣ್ಣು ಹಾಕುತ್ತಿದ್ದಾರೆಂದು ಅಣಕವಾಡಿದ ಗ್ರಾಮಸ್ಥರು, ಜಿಲ್ಲಾಡಳಿತ ಹಾಗೂ NSL ಶುಗರ್ ವಿರುದ್ಧ ಧಿಕ್ಕಾರ ಕೂಗಿದ್ರು. ಕಬ್ಬಿನ ಬಿಲ್ ಪಾವತಿ ಮಾಡದಿದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ರು.