Publish Date: Mon, 29 Apr 2019 (09:05 IST)
Updated Date: Mon, 29 Apr 2019 (09:07 IST)
ಮಂಡ್ಯ: ಮೊನ್ನೆ ಕಾಲೇಜು ಕಾರ್ಯಕ್ರಮವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೈತರ ಸಾಲ ಮನ್ನಾ ಮಾಡುವ ಬದಲು ಬೆಳೆಗೆ ನ್ಯಾಯಯುತ ಬೆಲೆ ಕೊಟ್ಟರೆ ಅವರೇ ಸಾಲ ತೀರಿಸುತ್ತಾರೆ ಎಂದಿದ್ದರು.
ದರ್ಶನ್ ಈ ರೀತಿ ಹೇಳಿಕೆ ಕೊಟ್ಟ ಬೆನ್ನಲ್ಲೇ ಇದೀಗ ಮಂಡ್ಯ ರೈತರು ಚಾಲೆಂಜಿಂಗ್ ಸ್ಟಾರ್ ಬೆನ್ನ ಹಿಂದೆ ಬಿದ್ದಿದ್ದು, ಸುಮಲತಾ ಅಮ್ಮನ ಪರವಾಗಿ ಚುನಾವಣೆಗೆ ಪ್ರಚಾರ ಮಾಡಿದ ರೀತಿಯಲ್ಲಿ ನಮ್ಮ ಪರವಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಡಲು ಮುಂದಾಳತ್ವ ವಹಿಸಿ ಎನ್ನುತ್ತಿದ್ದಾರೆ.
ದರ್ಶನ್ ಹೇಳಿಕೆಯಿಂದ ಮಂಡ್ಯ ರೈತರು ಖುಷ್ ಆಗಿದ್ದು, ನಟನಿಗೆ ತಮ್ಮ ಬೆಂಬಲ ಕೋರಿದ್ದಾರೆ. ಅಲ್ಲದೆ, ಬರೀ ಬಾಯ್ಮಾತಿನ ಹೇಳಿಕೆಯಾಗಬಾರದು. ನೇರವಾಗಿ ರೈತ ಪರ ಹೋರಾಟಕ್ಕೆ ಬೆಂಬಲ ಕೊಡಲಿ ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ