Publish Date: Tue, 03 Mar 2020 (11:26 IST)
Updated Date: Tue, 03 Mar 2020 (11:28 IST)
ಬೆಂಗಳೂರು : ಒಣ ಪ್ರತಿಷ್ಠೆ ಬಿಟ್ಟು ಕಲಾಪ ನಡೆಸಲು ಸಹಕಾರ ನೀಡಲಿ ಎಂದು ಸಿದ್ದರಾಮಯ್ಯಗೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಪ್ರಸ್ತಾಪಿಸಬೇಕಾದ ವಿಷಯ ಪ್ರಸ್ತಾಪಿಸಲಿ. ಸ್ಪೀಕರ್ ಅನುಮತಿಯನ್ನು ಪಡೆದು ವಿಷಯ ಪ್ರಸ್ತಾಪಿಸಲಿ. ನಿನ್ನೆ ಸ್ಪೀಕರ್ ಅನುಮತಿ ನೀಡುವುದಾಗಿ ಹೇಳಿದ್ದರು. ಆದ್ರೆ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಎಂದು ಗೊತ್ತಿದೆ. ಇಂದು ಸಂವಿಧಾನದ ಬಗ್ಗೆ ಚರ್ಚೆ ನಡೆಯಲಿದೆ. ಹೀಗಾಗಿ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಮನವಿ ಸಿಎಂ ಮನವಿ ಮಾಡಿದ್ದಾರೆ.