ತಾಯಿ ಕರಡಿಯಿಂದ ದೂರವಾಗಿದ್ದ ಕರಡಿ ಮರಿಗಳಿಗೆ ಮಾಡಿರುವ ಕೆಲಸವು ಚರ್ಚೆಗೆ ಗ್ರಾಸವಾಗಿದೆ.
ಚಿತ್ರದುರ್ಗ ಜಿಲ್ಲೆಯ ಕೆರೆಯಾಗಳಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗ್ರಾಮವಾಗಿರುವ ಕೆರೆಯಾಗಳಹಳ್ಳಿಯಲ್ಲಿ ಕರಡಿ ಮರಿಗಳನ್ನ ರಕ್ಷಿಸಿದ್ದಾರೆ ರೈತರು.
ಗ್ರಾಮದ ತಿಪ್ಪೇಸ್ವಾಮಿ ಎಂಬುವವರ ಜಮೀನ ಪೊದೆಯಲ್ಲಿದ್ದ ಕರಡಿ ಮರಿಗಳನ್ನು ಜನರು ಕಂಡಿದ್ದಾರೆ. ಅವು ತಾಯಿ ಕರಡಿಯಿಂದ ದೂರವಾಗಿದ್ದ ಕರಡಿ ಮರಿಗಳೆಂದು ತಿಳಿದು ಅವನ್ನ ರಕ್ಷಿಸಿದ್ದಾರೆ ರೈತರು.
ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿದ್ದು, ಕರಡಿ ಮರಿಗಳನ್ನ ಚಿತ್ರದುರ್ಗದ ಆಡು ಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಿದ್ದಾರೆ ಅರಣ್ಯ ಸಿಬ್ಬಂದಿ.