Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಣಾಳಿಕೆ ಘೋಷಣೆ ಮಾಡದ ನಟ ಉಪೇಂದ್ರ ಹೇಳಿದ್ದೇನು?

ಪ್ರಣಾಳಿಕೆ ಘೋಷಣೆ ಮಾಡದ ನಟ ಉಪೇಂದ್ರ ಹೇಳಿದ್ದೇನು?
ಬೆಂಗಳೂರು , ಶನಿವಾರ, 30 ಮಾರ್ಚ್ 2019 (14:39 IST)
ನೈಜ ಪ್ರಜಾಪ್ರಭುತ್ವ ಆಡಳಿತ  ನೀಡುವ ಸಲುವಾಗಿ  ನಮ್ಮ ಪಕ್ಷ ಕಾಳಜಿ ವಹಿಸಲಿದೆ ಎಂದು ಉತ್ತಮ ಪ್ರಜಾಕೀಯ ಪಕ್ಷ (UPP)ದ ಸಂಸ್ಥಾಪಕ ಅಧ್ಯಕ್ಷ ಉಪೇಂದ್ರ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಕ್ಷದ ಅಭ್ಯರ್ಥಿಗಳನ್ನು ಸುದ್ದಿಗೋಷ್ಠಿಗೆ ಪರಿಚಯಿಸಿ ಮಾತನಾಡಿದ ಉಪೇಂದ್ರ, "ನಮ್ಮ ವಿಚಾರವೇ ಪ್ರಚಾರ, ನಾವು ಸೇವಕರಲ್ಲಾ, ಕಾರ್ಮಿಕರು. ಮತ ನೀಡಿ ಗೆಲುವು ಸಾಧಿಸಿದರೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇವೆ" ಎಂದರು.

ಪಕ್ಷ ಅಧಿಕಾರಕ್ಕೆ ಬಂದರೆ ಸಾರ್ವಜನಿಕರ ಕುಂದು ಕೊರತೆ, ನಿವಾರಿಸಿ ರಿಪೋರ್ಟ್ ಕಾರ್ಡ್ ನೀಡುವ ಕುರಿತು ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ಅಣಕು ಪ್ರದರ್ಶನ ನೀಡಿದರು.

ಷರತ್ತುಬದ್ಧ ಬಾಹ್ಯಬೆಂಬಲ: ರಾಜ್ಯದ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಜನರು ಬಯಸುವ ಸರ್ಕಾರಕ್ಕೆ ಉತ್ತಮ ಪ್ರಜಾ ಕೀಯ ಪಕ್ಷ ಷರತ್ತುಬದ್ಧ ಬೆಂಬಲ ನೀಡುತ್ತದೆ ಎಂದ ಉಪೇಂದ್ರ, ಆಟೋ ರಿಕ್ಷಾ ಗುರುತಿಗೆ ಮತ ನೀಡಿ.  ನಿಮ್ಮ ಸಮಸ್ಯೆಗಳು ಆಟೋಮ್ಯಾಟಿ ಕ್ ಆಗಿ ಬದಲಾಗುತ್ತದೆ ಎಂದು ಹೇಳಿದರು.

ಜನಸಾಮಾನ್ಯರ ಮುಖ್ಯಮಂತ್ರಿಯಾಗಬೇಕು: Pranalike ಯಲ್ಲಿ ನಮಗೆ ನಂಬಿಕೆ ಇಲ್ಲ. ಯಾವಾಗ ನ್ಯಾಯಾಲಯದ ಮುಂದೆ ಪ್ರಣಾಳಿಕೆ ಇಟ್ಟು ಅದನ್ನು ಈಡೇರಿಸದವರು ರಾಜೀನಾಮೆ ನೀಡುವ ವ್ಯವಸ್ಥೆ ಬಂದಲ್ಲಿ ಮಾತ್ರ ಪ್ರಣಾಳಿಕೆ ರೂಪಿಸುತ್ತೇನೆ.  ಜನ ಸಾಮಾನ್ಯರ ಮುಖ್ಯಮಂತ್ರಿಯಾಗಬೇಕು ಎಂಬ ಹಂಬಲ ನಮ್ಮದು ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಎತ್ತಿನ ಗಾಡಿ ಮೇಲೆ ರೋಡ್ ಷೋ ನಡೆಸಿದ ನಿಖಿಲ್