ಬೆಂಗಳೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮದುವೆಯಾಗಲು ದಲಿತರ ಹೆಣ್ಣು ಮಗಳನ್ನು ನೀಡಲು ಸಿದ್ಧ ಎಂದಿದ್ದ ಗೋವಿಂದ ಕಾರಜೋಳ ಲೇವಡಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕಾರಜೋಳ ಮೊದಲು ಸಿಎಂ ಸವಾಲಿಗೆ ಉತ್ತರಿಸಲಿ. ನಂತರ ರಾಹುಲ್ ಗಾಂಧಿ ಮದುವೆ ವಿಚಾರ ಮಾತನಾಡಲಿ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಇನ್ನೊಂದೆಡೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೆಹರೂ ಕುಟುಂಬದಲ್ಲಿ ಆಗಿರುವಷ್ಟು ಅಂತರ್ಜಾತಿ ವಿವಾಹ ಬೇರೆಲ್ಲೂ ಆಗಿಲ್ಲ. ಈ ವಿಚಾರದ ಬಗ್ಗೆ ಮಾತನಾಡಲು ಗೋವಿಂದ ಕಾರಜೋಳಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ದಲಿತರನ್ನು ಮನೆಗೆ ಕರೆಸಿ ಊಟ ಹಾಕಿಸಿದ್ದಕ್ಕೆ ಬಿಎಸ್ ಯಡಿಯೂರಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದರ ವಿರುದ್ಧವಾಗಿ ಗೋವಿಂದ ಕಾರಜೋಳ ರಾಹುಲ್ ಗಾಂಧಿ ಮದುವೆ ವಿಚಾರವೆತ್ತಿ ಲೇವಡಿ ಮಾಡಿದ್ದರು.