ಮಾರ್ಚ್ - 21 ರಿಂದ ಸಾರಿಗೆ ನೌಕರರು ಅನಿರ್ದಿಷ್ಟವಾಧಿ ಮುಷ್ಕರ ನಡೆಸಲ್ಲಿದ್ದಾರೆ.ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಸಂಘಟನೆಯಿಂದ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಮಾರ್ಚ್ 21 ರಿಂದ ಅನಿರ್ಧಿಷ್ಟವಾಧಿ ಮುಷ್ಕರ ನಡೆಸಲು ಅನಂತ್ ಸುಬ್ಬರಾವ್ ಸಿಎಂಗೂ ಪತ್ರ ಬರೆದಿದ್ದು, ನೌಕರರ ಮುಷ್ಕರಕ್ಕೆ 23 ಸಾವಿರ ಬಸ್ ಗಳು ಸ್ಥಗಿತಗೊಳ್ಳುತ್ತೆ.ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನೌಕರರು ಕರೆ ಕೊಟ್ಟಿದ್ದಾರೆ.
ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರ ಸಮಾನಮನಸ್ಕರ ವೇದಿಕೆಯಿಂದ ಮಾರ್ಚ್ 24ರಿಂದ ಮುಷ್ಕರಕ್ಕೆ ಕರೆ ಕೊಡಲಾಗಿದೆ.ಎರಡೂ ಬಣಗಳು ಪ್ರತ್ಯೇಕವಾಗಿ ಕರೆ ನೀಡಿರುವುದು ನೌಕರರಿಗೆ ಗೊಂದಲ ಉಂಟುಮಾಡಿದೆ.ನೌಕರರ ಕೂಟದ ಅಧ್ಯಕ್ಷ ಆರ್.ಚಂದ್ರಶೇಖರ್ ನೌಕರರ ಸಮಾನಮನಸ್ಕರ ವೇದಿಕೆಯು ಮಾರ್ಚ್ 5ರಂದೇ ಸಭೆ ನಡೆಸಿ ಮುಷ್ಕರಕ್ಕೆ ಕರೆ ನೀಡಿದೆ. ಎರಡೂ ಬಣದ ಬೇಡಿಕೆಗಳು ಭಿನ್ನವಾಗಿರುವುದು ಒಗ್ಗಟ್ಟಿನ ಹೋರಾಟಕ್ಕೆ ತೊಡಕು ಉಂಟುಮಾಡಿದೆ.
ಯುಗಾದಿಗೆ ಊರಿಗೆ ಹೋಗುವ ಮೊದಲು ಬಿ ಕೇರ್ ಫುಲ್ ಆಗಿರುವ ಅವಶ್ಯಕತೆ ಇದೆ.ಯುಗಾದಿಗೆ ಊರಿಗೆ ಹೋಗುವವರಿಗೆ ಸಾರಿಗೆ ನೌಕರರು ಬಿಗ್ ಶಾಕ್ ಕೊಟ್ಟಿದ್ದಾರೆ.ಮಂಗಳವಾರವೇ ಬಸ್ ಸ್ಥಗಿತ ಗೊಳ್ಳೋದ್ರಿಂದ ಊರಿಗೆ ಹೋಗೋರಿಗೆ ಸಂಕಷ್ಟ ಎದುರಾಗಿದೆ. ಯುಗಾದಿಯ ಮುನ್ನಾ ದಿನ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ