ಬೆಂಗಳೂರಿನಲ್ಲಿ ಶಾಸಕರ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆದಿದೆ.ಹೆಬ್ಬಾಳ ಶಾಸಕ ಭೈರತಿ ಸುರೇಶ್ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿರುವ ಘಟನೆ ಸಂಜಯ್ ನಗರದ ನಾಗಶೆಟ್ಟಿ ಹಳ್ಳಿ ಬಸ್ ನಿಲ್ಧಾಣ ಬಳಿ ನಡೆದಿದೆ.
ನಿನ್ನೆ ತಡರಾತ್ರಿ ಶಾಸಕರ ಪೋಟೋ ಇರುವ ಬ್ಯಾನರ್ ಕಟ್ಟಲಾಗುತ್ತಿತ್ತು.ಶ್ರೀನಿವಾಸ ಕಲ್ಯಾಣೋತ್ಸವ ಹಿನ್ನಲೆ ಶಾಸಕರ ಪೋಟೋ ಇರುವ ಬ್ಯಾನರ್ ಕಟ್ಟಲಾಗುತ್ತಿತ್ತು.ಈ ವೇಳೆ ಗಲಾಟೆ ಮಾಡಿದ ಸ್ಥಳೀಯರಾದ ಜಗದೀಶ್, ಪುನೀತ್ ಹಾಗೂ ಇತರರಿಗೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಲಾಗಿದೆ.
ಯುವಕರ ಗಲಾಟೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ಸಂಬಂಧ ಸತೀಶ್ ರಿಂದ ಸಂಜಯ್ ನಗರ ಠಾಣೆಗೆ ದೂರು ನೀಡಲಾಗಿದೆ.ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪ ಮಾಡಿ ಸತೀಶ್ ದೂರು ನೀಡಿದ್ದಾರೆ.ದೌರ್ಜನ್ಯ ತಡೆಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು,ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ಮಗ ಕಟ್ಟಾ ಜಗದೀಶ್ ಕುಮಾರ್ ಮೇಲೆ ಎಫ್ ಐ ಆರ್ ದಾಖಲಾಗಿದೆ.ಬ್ಯಾನರ್ ಕಟ್ಟುವ ವಿಚಾರಕ್ಕೆ ಕಟ್ಟಾ ಜಗದೀಶ್ ಹಾಗೂ ಸಹಚರರ ನಡುವೆ ಗಲಾಟೆ ನಡೆದಿದೆ.
ಸಂತೋಷ್ ಮತ್ತು ರಾಜಗೋಪಾಲ ಎಂಬುವರ ಮೇಲೆ ಹಲ್ಲೆ ಮಾಡಿ ಹತ್ಯೆಗೆ ಯತ್ನ ಮಾಡಿರುವ ಆರೋಪ ಕೇಳಿಬಂದಿದ್ದು,ಶ್ರೀನಿವಾಸ ಕಲ್ಯಾಣೊತ್ಸವ ಸಂಬಂಧ ಬ್ಯಾನರ್ ಕಟ್ಟುವಾಗ ಕಿರಿಕ್ ಉಂಟಾಗಿದೆ.ಮದ್ಯರಾತ್ರಿ 12 ಗಂಟೆ ಸುಮಾರಿಗೆ ಬಂದು ಕಟ್ಟಾ ಜಗದೀಶ್ ಹಾಗೂ ಸಹಚರರು ಹಲ್ಲೆ ಮಾಡಿದ್ದಾರೆ.ಇದರ ಬೆನ್ನಲ್ಲೆ ಕಟ್ಟಾ ಜಗದೀಶ್ ಮತ್ತು ಗ್ಯಾಂಗ್ ವಿರುದ್ದ ಹಲ್ಲೆ, ಕೊಲೆ ಯತ್ನ, ಜಾತಿನಿಂದನೆ, ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.ಪ್ರಕರಣ ದಾಖಲಾದ ಬೆನ್ನ ಕಟ್ಟಾ ಜಗದೀಶ್ ಮತ್ತು ಸಹಚರರು ಎಸ್ಕೇಪ್ ಆಗಿದ್ದಾರೆ.ಸದ್ಯ ಕಟ್ಟಾ ಜಗದೀಶ್ ಹಾಗೂ ಸಹಚರರಿಗೆ ಹುಡುಕಾಟ ನಡೆಸಲಾಗಿದೆ.