Publish Date: Sat, 08 Apr 2023 (09:34 IST)
Updated Date: Sat, 08 Apr 2023 (10:02 IST)
ರಾಮನಗರ : ಪಕ್ಷದ ಕಾರ್ಯಕರ್ತರೇ ನಮ್ಮ ಸ್ಟಾರ್ಗಳು, ನಾವು ಯಾವುದೇ ಸ್ಟಾರ್ ಪ್ರಚಾರಕರನ್ನು ಕರೆಸುವುದಿಲ್ಲ ಎಂದು ರಾಮನಗರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಪರ ನಟ ಕಿಚ್ಚ ಸುದೀಪ್ ಪ್ರಚಾರ ನಡೆಸುವ ವಿಚಾರದ ಬಗ್ಗೆ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿಗೆ ಬೆಂಬಲ ನೀಡುವುದಕ್ಕಿಂತಲೂ ಬೊಮ್ಮಾಯಿ ಅವರ ಜೊತೆಗಿನ ಸುದೀಪ್ ಆತ್ಮೀಯತೆ ಚಿಕ್ಕ ವಯಸ್ಸಿನಿಂದಲೂ ಇದೆ. ಹೀಗಾಗಿ ಅವರಿಗೆ ಗೌರವ ನೀಡಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು.
ನಾವು ಯಾವುದೇ ಸ್ಟಾರ್ ಪ್ರಚಾರಕರನ್ನು ಕರೆಸುವುದಿಲ್ಲ. ನಮಗೆ ಪಂಚರತ್ನ ಯೋಜನೆಯೇ ಸ್ಟಾರ್ ಯೋಜನೆಗಳು. ನಮ್ಮ ಪಕ್ಷದ ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು. ದೇವೇಗೌಡರ 60 ವರ್ಷದ ರಾಜಕಾರಣ, ಅಭಿವೃದ್ಧಿ ಕೊಡುಗೆಯನ್ನು ಜನ ಮರೆತಿಲ್ಲ. ಹೀಗಾಗಿ ನಾವು ಯಾವುದೇ ಸಿನಿಮಾ ಸ್ಟಾರ್ ಪ್ರಚಾರಕರನ್ನು ಕರೆಸುವುದಿಲ್ಲ ಎಂದರು.