ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೂ ಲಸಿಕೆ ಪಡೆಯದವರನ್ನು ಗುರುತಿಸಿ ಪಾಲಿಕೆ ಸಂಚಾರಿ ಲಸಿಕಾ ತಂಡವು ಮನೆ-ಮನೆಗೆ ತೆರಳಿ ಲಸಿಕೆ ನೀಡುತ್ತಿದೆ. ವಿಶೇಷವಾಗಿ ಮನೆಯಿಂದ ಹೊರಗೆ ಬಾರದಂತಹ ಹಿರಿಯರು, ವಿಕಲಚೇತನರು ಹಾಗೂ ವೃದ್ಧಾಶ್ರಮಗಳಿಗೆ ಸಂಚಾರಿ ಮೊಬೈಲ್ ತಂಡ ಭೇಟಿ ನೀಡಿ ಲಸಿಕೆ ನೀಡಲಾಗುತ್ತಿದೆ. ಜೊತೆಗೆ ಕೊಳಗೇರಿ ಪ್ರದೇಶದ ಮನೆ-ಮನೆಗೆ ಭೇಟಿ ನೀಡಿ ಲಿಸಕೆ ಪಡೆಯದವರಿಗೆ ಜಾಗೃತಿ ಮೂಡಿಸಿ ಲಸಿಕೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್ ಅನ್ನು ನೀಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕಾ ಮೇಳದ ಅಂಗವಾಗಿ ಪಾಲಿಕೆ ಹಾಗೂ ಖಾಸಗಿ ಸೇರಿದಂತೆ ಆಯಾ ವಲಯ ವ್ಯಾಪ್ತಿಯಲ್ಲಿ 994 ಲಸಿಕಾ ಕೇಂದ್ರಗಳ ವ್ಯವಸ್ಥೆ ಮಾಡಿಕೊಂಡು ಬುಧವಾರ ಒಂದೇ ದಿನ ರಾತ್ರಿಯವರೆಗೆ 1,45,477 ಮಂದಿ ಲಸಿಕೆಯನ್ನು ಪಡೆದಿದ್ದಾರೆ ಎಂದು ರಂದೀಪ್ ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ಲಸಿಕಾಕರಣವು ಸಕ್ರಿಯವಾಗಿ ನಡೆಯುತ್ತಿದ್ದು, ಇದುವರೆಗೂ ಮೊದಲನೇ ಡೋಸ್ ಶೇ.84 ರಷ್ಟು ಹಾಗೂ ಎರಡನೇ ಡೋಸ್ ಶೇ. 42 ರಷ್ಟು ಸೇರಿ ಒಟ್ಟಾರೆ 1,13,80,806 ಮಂದಿ ಲಸಿಕೆ ಪಡೆದಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ನಗರದ ವಿವಿಧೆಡೆ ಲಸಿಕೆ:
ನಗರದ ಕೊಳಗೇರಿ ಪ್ರದೇಶಗಳು, ಲಸಿಕೆ ಪಡೆಯದ ಪ್ರದೇಶಗಳು, ಬೀದಿ ಬದಿ ವ್ಯಾಪಾರಿಗಳು, ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಟ್ಟಡ ನಿರ್ಮಾಣ ಮಾಡುವ ಸಿಬ್ಬಂದಿ, ವಾಣಿಜ್ಯ ಪ್ರದೇಶಗಳು, ಮಾಲ್ ಗಳು, ದೇವಸ್ಥಾನ ಸೇರಿದಂತೆ ಇನ್ನಿತರೆ ಸ್ಥಳಗಲ್ಲಿ ಲಸಿಕೆ ನೀಡಲಾಗಿದೆ.
ಲಾಲ್ ಭಾಗ್ ಲಸಿಕಾ ಕೇಂದ್ರ:
ಲಾಲ್ ಬಾಗ್ ಪಶ್ಚಿಮ ದ್ವಾರದ ಬಳಿ ಲಸಿಕಾ ಕೇಂದ್ರದ ವ್ಯವಸ್ಥೆ ಮಾಡಿ ವಾಯುವಿಹಾರಕ್ಕೆ ಬರುವವರಲ್ಲಿ ಲಸಿಕೆ ಪಡೆದವರನ್ನು ಗುರುತಿಸಿ ಲಸಿಕೆ ನೀಡಲಾಗುತ್ತಿದೆ ಎಂದೂ ಹೇಳಿದ್ದಾರೆ