ಬೆಂಗಳೂರು: ಮಠಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಲ್ಲ. ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿಧಾನ ಪರಿಷತ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಠಗಳ ಉಸಾಬರಿ ನಮಗ್ಯಾಕೆ ಬೇಕು, ಜನರ ಅಭಿಪ್ರಾಯ ಕೇಳಿದ್ದೆವು, ಈಗ ಕೈಬಿಟ್ಟಿದ್ದೇವೆ. ಎಂದು ಸಿಎಂ ಹೇಳಿದ್ದಾರೆ. ಮಠ, ದೇವಾಲಯಗಳನ್ನು ಸರ್ಕಾರ ನಿಯಂತ್ರಣ ಮಾಡಲ್ಲ ಸರ್ಕಾರಕ್ಕೆ ಆ ರೀತಿ ಉದ್ಏಶವಿಲ್ಲ, ಪ್ರಸ್ತಾವನೆಯೂ ಇಲ್ಲ.ಬೇರೆಯವರ ಮಠ, ದೇಗುಲ ಪಡೆದು ಏನು ಮಾಡೋಣ. ಮುಜರಾಯಿ ಇಲಾಖೆ ದೇಗುಲಗಳನ್ನು ನೋಡಿಕೊಳ್ಳುತ್ತವೆ. ಸಚಿವರಿಗೆ ತಪ್ಪು ಮಾಹಿತಿಯಿಂದಾಗಿ ಆ ರೀತಿ ಆಗಿ ಹೋಗಿದೆ. ಆ ಸುತ್ತೋಲೆಯನ್ನು ವಾಪಸ್ ಪಡೆಯುವಂತೆ ಹೇಳಿದ್ದೇನೆ. ವಿಧಾನಪರಿಷತ್ ನಲ್ಲಿ ಸಿಎಂ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ