Publish Date: Thu, 28 Sep 2023 (14:21 IST)
Updated Date: Thu, 28 Sep 2023 (11:24 IST)
ನಮಗೆ ಆಪರೇಷನ್ ಹಸ್ತ ಅವಶ್ಯಕತೆ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲಾ ಜಿಲ್ಲಾ ಸಚಿವರು, ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ. ಜೆಡಿಎಸ್,ಬಿಜೆಪಿ ನಡುವೆ ಮೈತ್ರಿಯಾಗಿದೆ. ಆದಾದ ಮೇಲೆ ಬಹಳಷ್ಟು ಜನ ಈಕಡೆ ಬರ್ತಿದ್ದಾರೆ. ಮೈತ್ರಿ ಸಹಿಸಲು ಸಾಧ್ಯವಿಲ್ಲ ಅಂತ ಬರ್ತಿದ್ದಾರೆ. ನಿನ್ನೆ ಮೂವರು ಶಾಸಕರನ್ನ ಭೇಟಿ ಮಾಡಿದ್ದೇನೆ. ಅವರ ಜೊತೆ ನಾನು ಮಾತನಾಡಿದ್ದೇನೆ. ಶಿವಮೊಗ್ಗದಿಂದ ಕೆಲವರು ಬರುವವರಿದ್ದರು. ಅವರಿಗೆ ಪ್ರತ್ಯೇಕ ಸಮಯ ಕೊಟ್ಟಿದ್ದೇನೆ. ಮೈತ್ರಿಯನ್ನ ವಿರೋಧಿಸಿ ಹೊರಗೆ ಬರ್ತಿದ್ದಾರೆ. ಬರುವವರನ್ನ ಸೇರಿಸಿಕೊಳ್ಳಲು ಹೇಳ್ತೇನೆ. ನಮ್ಮ ಮುಖಂಡರಿಗೆ ನಾನು ಕರೆ ನೀಡ್ತೇನೆ. ರಾಮನಗರದಿಂದ ಕೆಲವರು ಪಕ್ಷಕ್ಕೆ ಬರಲು ಮುಂದಾಗಿದ್ದಾರೆ ಎಂದರು.