Publish Date: Thu, 29 Dec 2022 (09:51 IST)
Updated Date: Wed, 28 Dec 2022 (21:52 IST)
ಬೆಳಗಾವಿ : ರಾಮನಗರದಲ್ಲಿ ರಾಮ ಮಂದಿರ, ಸೀತೆ ಮಂದಿರ, ಶಿವ ಮಂದಿರವಾದರೂ ಕಟ್ಟಲಿ, ಅಷ್ಟೇ ಯಾಕೆ ಅಶ್ವಥ್ ನಾರಾಯಣನ ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ಕೊಟ್ಟರು.
ರಾಮನಗರದಲ್ಲಿ ರಾಮದೇವರಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಮನಗರದಲ್ಲಿ ರಾಮ ಮಂದಿರವನ್ನು ಕಟ್ಟಲು ಬೇಡ ಅಂತಾ ಯಾರು ತಡೆದುಕೊಂಡಿದ್ದಾರೆ. ಅವರು ಜಿಲ್ಲಾ ಮಂತ್ರಿ ಇದ್ದಾರೆ? ಅವರನ್ನ ನಾವು ತಡೀತಿವಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಬಾರ್, ರೆಸ್ಟೊರೆಂಟ್ಗಳಿಗೆ ಸ್ಪೆಷಲ್ ಮಾಸ್ಕ್ ಬಂದಿದೆ ಎಂಬ ಸಚಿವ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಮಾತನಾಡಿ, ಪೈಪ್ ಹಾಕೊಂಡು ಬಿಡ್ರಿ ಎಲ್ಲ. ಆರ್.ಅಶೋಕ್ ಹಾಗೂ ಅವರ ಫ್ರೆಂಡ್ಸ್ ಎಲ್ಲ ಬಾರ್, ರೆಸ್ಟೊರೆಂಟ್ಗಳಲ್ಲಿ ಪೈಪ್ ಹಾಕೊಂಡು ಸೇವನೆ ಮಾಡಲಿ ಎಂದು ವ್ಯಂಗ್ಯವಾಡಿದರು.