Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ವಿವಾದಿತ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವ ಬಗ್ಗೆ ಬೆಳಗಾವಿ ಅಧಿವೇಶನದಲ್ಲೇ ಸಿಎಂಗೆ ಮನವಿ ಮಾಡಲಾಗಿತ್ತು. ಕೃಷಿಕಾಯ್ದೆ ವಾಪಸ್ ಪಡೆಯಲು ಸಮಯ ಬೇಕು, ಬೆಂಗಳೂರು ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುವುದಾಗಿ ಸಿಎಂ ಭರವಸೆಯನ್ನ ಕೊಟ್ಟಿದ್ದರು.
ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್ ತಗೊಂಡಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಇನ್ನೂ ಕಾಯ್ದೆ ವಾಪಸ್ ಪಡೆದಿಲ್ಲ. ಎಂದು ಬೆಂಗಳೂರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸ್ಪೀಕರ್ ಗೆ ಇಂದು ಕೊಟ್ಟಿರುವ ವಿಷಯದಲ್ಲಿ ಕೃಷಿ ಕಾಯ್ದೆ ಬಗ್ಗೆ ಉಲ್ಲೇಖ ಇಲ್ಲ. ಬೆಳಗಾವಿ ಅಧಿವೇಶನದಲ್ಲಿ ಸಿಎಂ ಕೊಟ್ಟ ಭರವಸೆ ಬಗ್ಗೆ ನಮಗೆ ಅನುಮಾನ ಮೂಡು ತ್ತಿದೆ. ಸಿಎಂ ರೈತ ವಿರೋಧಿ ಆಗ್ತಿದ್ದಾರೆ. ರಾಜ್ಯ ಸರ್ಕಾರದ ನೈತಿಕತೆ ದಿವಾಳಿ ಆಗಿದೆ. ರೈತರಿಗೆ ಕೊಟ್ಟಿರುವ ವಾಗ್ದಾನ ಸರ್ಕಾರ ಉಳಿಸಿ ಕೊಂಡಿಲ್ಲ. ವಿಧಾನಸೌಧ ಮುತ್ತಿಗೆ ಹಾಕಲು ರೈತ ಸಂಘ ಸಜ್ಜಾಗಿದೆ. ಮೆಜೆಸ್ಟಿಕ್ ನ ಸಿಟಿ ರೈಲ್ವೇ ನಿಲ್ದಾಣದಿಂದ ಪ್ರತಿಭಟನಾ ಮೆರವ ಣಿಗೆ ನಡೆಸಲಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.