Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಭಾರತ ಚುನಾವಣಾ ಆಯೋಗದ ಪತ್ರ ಸಂಖ್ಯೆ: (1) 23/2021-ERS, ದಿನಾಂಕ: 02.08.2021, (2) 23.2021-ERS(Vol-IT), ದಿನಾಂಕ: 03.08.2021. (3) 24/2021-ERS (Vol - IT), ದಿನಾಂಕ : 03.08.20210 ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಬೆಂಗಳೂರು ವ್ಯಾಪ್ತಿಯಲ್ಲಿ ಅರ್ಹತಾ ದಿನಾಂಕ: 01.01.2022 ನ್ನು ಉಲ್ಲೇಖಿಸಿ ದಿನಾಂಕ: 05.01.2022 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮಾಡುವ ಸಂಬಂಧ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವ ವೇಳಾ ಪಟ್ಟಿಯನ್ನು ನಿಗಧಿಪಡಿಸಿರುತ್ತಾರೆ. ಸದರಿ ವೇಳಾಪಟ್ಟಿಯ ಮಾಹಿತಿಯನ್ನು ಈಗಾಗಲೇ ಸಾರ್ವಜನಿಕರ ಗಮನಕ್ಕೆ ತರಲಾಗಿರುತ್ತದೆ.
ಮುಂದುವರೆದು, ಭಾರತ ಚುನಾವಣಾ ಆಯೋಗದ ಪತ್ರ ಸಂಖ್ಯೆ: 23/2021-ERS/Vol - II), ದಿನಾಂಕ: 27.08.2021 ರಂತೆ ಪರಿಷ್ಕರಣೆ ಕಾರ್ಯಚಟುವಟಿಕೆಗಳ ದಿನಾಂಕಗಳನ್ನು ಪರಿಷ್ಕರಿಸಿ ಮರು ನಿಗದಿಪಡಿಸಲಾಗಿರುತ್ತದೆ.