Webdunia - Bharat's app for daily news and videos

Install App

ಕರ್ನಾಟಕದಲ್ಲಿ ಮೊದಲ ಕೇಸ್ ಪತ್ತೆ

Webdunia
ಗುರುವಾರ, 2 ಡಿಸೆಂಬರ್ 2021 (15:13 IST)
ಕರೊನಾ, ಡೆಲ್ಟಾ ಸೋಂಕಿನ ಭೀತಿ ನಡುವೆ ವಿಶ್ವದೆಲ್ಲೆಡೆ ಮತ್ತಷ್ಟು ತಲ್ಲಣ ಮೂಡಿಸಿರುವ ಒಮಿಕ್ರಾನ್​ ಕರ್ನಾಟಕಕ್ಕೂ ವಕ್ಕರಿಸಿದೆ. ರೂಪಾಂತರಿ ಹೊಸ ವೈರಸ್​ ಒಮಿಕ್ರಾನ್​ ಗುರುವಾರ ರಾಜ್ಯದ ಇಬ್ಬರಲ್ಲಿ ದೃಢಪಟ್ಟಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.ಸೋಂಕಿತರ ಪೈಕಿ ಒಬ್ಬನ ವಯಸ್ಸು 66, ಮತ್ತೊಬ್ಬನ ವಯಸ್ಸು 46. ಇವರಿಬ್ಬರೂ ದಕ್ಷಿಣ ಆಫ್ರಿಕಾದಿಂದ ಕರ್ನಾಟಕಕ್ಕೆ ಬಂದಿದ್ದಾರೆ. ತಪಾಸಣೆ ಮಾಡಿದಾಗ ಇಬ್ಬರಲ್ಲೂ ಒಮಿಕ್ರಾನ್​ ಸೋಂಕು ದೃಢಪಟ್ಟಿದೆ. ಆ ಮೂಲಕ ಭಾರತ ದೇಶದಲ್ಲೇ ಇದು ಮೊದಲ ಪ್ರಕರಣ ಆಗಿದೆ.
 
ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್​ ಅಗರ್​ವಾಲ್​ ಅವರು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಖಚಿತ ಪಡಿಸಿದ್ದಾರೆ. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಜನತೆ ಭಯ ಪಡಬೇಡಿ. ಆದರೆ ಜಾಗ್ರತೆ ವಹಿಸಿ ಎಂದು ತಿಳಿಸಿದ್ದಾರೆ.
 
ದೆಹಲಿ ಪ್ರವಾಸದಲ್ಲಿರುವ ಸಿಎಂ ಬೊಮ್ಮಾಯಿ, ಕರ್ನಾಟಕದಲ್ಲಿ ಒಮಿಕ್ರಾನ್​ ಕೇಸ್​ ಪತ್ತೆಯಾಗಿದ್ದರ ಕುರಿತು ಮಾತನಾಡಿದ್ದಾರೆ. ಕರ್ನಾಟಕಕ್ಕೆ ಇದೊಂದು ದೊಡ್ಡ ಸವಾಲು. ಒಮಿಕ್ರಾನ್​ ತಡೆಯೋ ಬಗ್ಗೆ ತಜ್ಞರ ಜತೆ ಚರ್ಚಿಸಿದ್ದೇವೆ, 13 ದೇಶದಲ್ಲಿ ಒಮಿಕ್ರಾನ್​ ಹೆಚ್ಚಾಗಿದೆ. ಪ್ರತಿ ವಿದೇಶಿ ಪ್ರವಾಸಿಗರ ಮೇಲೆ ನಿಗಾ ಇಟ್ಟಿದ್ದೇವೆ. ವಿದೇಶದಿಂದ ಬಂದವರಿಗೆ 7 ದಿನ ಕ್ವಾರಂಟೈನ್​ ಮಾಡಲಾಗುತ್ತಿದೆ. ಮಾನಮ್ಮ ಜನರ ಆರೋಗ್ಯ ರಕ್ಷಣೆಯನೇ ನಮ್ಮ ಆದ್ಯ ಕರ್ತವ್ಯ. ಒಬ್ಬನಿಂದ ಇಡೀ ನಗರಕ್ಕೆ ಸೋಂಕು ಹರಡುವುದನ್ನು ತಡೆಯಬೇಕು ಎಂದು ಸಿಎಂ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments