ಮೆಟಾವರ್ಸ್ನ ಜಾಲತಾಣದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಕಾಮುಕರ ಗುಂಪೊಂದು ಗ್ಯಾಂಗ್ರೇಪ್ ಮಾಡಿದ ಆಘಾತಕಾರಿ ಘಟನೆ ಬ್ರಿಟನ್ನಲ್ಲಿ ನಡೆದಿದೆ. ಬಾಲಕಿ ಮೇಲೆ ದೈಹಿಕವಾಗಿ ಯಾವುದೇ ಅಪಾಯವಾಗದೇ ಇದ್ರು ಮಾನಸಿಕವಾಗಿ ಜರ್ಜರಿತವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂಥ ಘಟನೆಗಳ ಕುರಿತು ತನಿಖೆ ನಡೆಸಲು ಕಾಯ್ದೆಗಳೇ ಇಲ್ಲದ ಕಾರಣ, ಈ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.