ಅಪ್ರಾಪ್ತ ಬಾಲಕಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸೆಗಿದ ಆರೋಪಿಯನ್ನು ಉಳ್ಳಾಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಮೂಲದ ಮೊಹಮ್ಮದ್ ಝರೀನ್ (25) ಬಂಧಿತ ಆರೋಪಿ.
ಅಪ್ರಾಪ್ತ ಬಾಲಕಿಯೊಡನೆ ಪ್ರೀತಿಯ ನಾಟಕವಾಡಿದ್ದ ಮೊಹಮ್ಮದ್ ನಾಲ್ಕು ತಿಂಗಳ ಹಿಂದೆ ಆಕೆಯನ್ನು ಮಂಗಳೂರಿಗೆ ಕರೆತಂದಿದ್ದ. ನಂತರ ಆಕೆಯನ್ನು ಬಾಡಿಗೆಮನೆಯೊಂದಕ್ಕೆ ಕರೆದೊಯ್ದು ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದ.
ಈತನ ಬಣ್ಣ ಬಯಲಾದ ಬಳಿಕ ಬಾಲಕಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಳು. ಆರೋಪಿಯ ವಿರುದ್ದ ಪೊಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.