Select Your Language

Notifications

webdunia
webdunia
webdunia
webdunia

ಸಂಚಾರ ನಿಯಮ ಉಲ್ಲಂಘಟನೆ, ಸಿಎಂ ಸಿದ್ದರಾಮಯ್ಯನೂ ಕಟ್ಟಬೇಕಾಯಿತು ಭಾರೀ ದಂಡ

ಮುಖ್ಯಮಂತ್ರಿ ಸಿದ್ದರಾಮಯ್ಯ

Sampriya

ಬೆಂಗಳೂರು , ಶನಿವಾರ, 6 ಸೆಪ್ಟಂಬರ್ 2025 (14:29 IST)
ಬೆಂಗಳೂರು: 7 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಕೂಡಾ ಇದೀಗ ದಂಡವನ್ನು ಪಾವತಿಸಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸುತ್ತಿರುವ ಇನೊವಾ ಕಾರು 2024ರಿಂದ ಈವರೆಗೆ ಏಳು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದು ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಅದರಂತೆ ಸಿಎಂ ಸಿದ್ದರಾಮಯ್ಯ ಅವರ ಕಚೇರಿ 2,500 ಸಾವಿರ ರೂಗಳನ್ನು ದಂಡವಾಗಿ ಪಾವತಿಸಿದೆ ಎಂದು ತಿಳಿದುಬಂದಿದೆ.

ಸಂಚಾರ ಪೊಲೀಸ್ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಪ್ರಸ್ತುತ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ 50ರ ರಿಯಾಯಿತಿ ಅಡಿ ದಂಡ ಪಾವತಿಸಲು ರಾಜ್ಯ ಸರ್ಕಾರವು ಅವಕಾಶ ಕಲ್ಪಿಸಿದ್ದು, ಸಿದ್ದರಾಮಯ್ಯ ಅವರು ಬಳಸುತ್ತಿರುವ ಕಾರಿನ ಮೇಲಿನ ಪ್ರಕರಣಗಳ ಸಂಬಂಧ ದಂಡ ಪಾವತಿಯಾಗಿದೆ ಎಂದು ತಿಳಿದುಬಂದಿದೆ. 

ಇನ್ನೂ ಪ್ರಯಾಣದ ವೇಳೆ ಸಿದ್ದರಾಮಯ್ಯ ಅವರು ಆರೂ ಬಾರಿ ಸೀಟ್ ಬೆಲ್ಟ್‌ ಧರಿಸದಿರುವುದು ಕ್ಯಾಮಾರದಲ್ಲಿ ಸೆರೆಯಾಗಿದೆ. ಶೇ 50ರಷ್ಟು ರಿಯಾಯಿತಿ ಅನುಸಾರ 2,500 ರೂಪಾಯಿ ದಂಡವಿತ್ತು. ಆರು ಬಾರಿ ಸೀಟು ಬೆಲ್ಟ್ ಧರಿಸದಿದ್ದಕ್ಕಾಗಿ ಮತ್ತು ಒಂದು ಬಾರಿ ಅತಿವೇಗದಲ್ಲಿ ಚಲಿಸಿದ್ದಕ್ಕಾಗಿ ದಂಡ ವಿಧಿಸಲಾಗಿದ್ದು, ಸದ್ಯ ದಂಡದ ಮೊತ್ತವನ್ನು ಪಾವತಿಸಲಾಗಿದೆ ಎಂದು ಸಂಚಾರ ಪೊಲೀಸ್ ಮೂಲಗಳು ತಿಳಿಸಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಶ್ಚಿಯನ್ ರಲ್ಲಿ ಇದ್ಯಾವುದು ನಮಗೇ ಗೊತ್ತಿಲ್ಲದ ಜಾತಿ, ಉಪಜಾತಿ: ಅನಿಲ್ ಥಾಮಸ್