ಮಂಗಳೂರು : ಇಂದು ಪಿಯುಸಿ ಪರೀಕ್ಷೆ ನಡೆಯುತ್ತಿರುವ ಹಿನ್ನಲೆಯಲ್ಲಿ ಪಿಯುಸಿ ಪರೀಕ್ಷಾ ಕೇಂದ್ರದ ಬಳಿ ನಿಯಮ ಉಲ್ಲಂಘನೆಯಾಗಿದೆ.
ಮಂಗಳೂರು ಹೊರವಲಯದ ತಲಪಾಡಿಯಲ್ಲಿರುವ ಮರಿಯಾಶ್ರಮ ಸಂಸ್ಥೆಯ ಬಳಿ ಪರೀಕ್ಷೆ ಬರೆಯುವುದಕ್ಕೆ ಬಂದಿರುವ ವಿದ್ಯಾರ್ಥಿಗಳು ಗುಂಪಾಗಿ ನಿಂತಿದ್ದಾರೆ. ಆದರೂ ಸಿಬ್ಬಂದಿಗಳು ಏನು ಹೇಳದೆ ನಿರ್ಲಕ್ಷ್ಯ ತೋರಿದ್ದಾರೆ.
ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುವುದಾಗಿ ಹೇಳಿದ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಪೋಷಕರು ಇಲಾಖೆಯ ಮೇಲೆ ಆಕ್ರೋಶ ವ್ತಕ್ತಪಡಿಸಿದ್ದಾರೆ.