ಕೊಲೆ ಅಪರಾಧಿ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ಶಾಕ್: ವಿಧಾನಸಭೆ ಸಚಿವಾಲಯದ ಮಹತ್ವದ ಆದೇಶ

ಕೃಷ್ಣವೇಣಿ ಕೆ
ಶನಿವಾರ, 2 ಮೇ 2026 (17:55 IST)
ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿ ಜೀವಾವಧಿ ಶಿಕ್ಷೆಗೊಳಗಾಗಿರುವ ಶಾಸಕ ವಿನಯ್ ಕುಲಕರ್ಣಿಗೆ ವಿಧಾನಸಭೆ ಸಚಿವಾಲಯ ನೀಡಿರುವ ಈ ಮಹತ್ವದ ಆದೇಶ ಬಿಗ್ ಶಾಕ್ ನೀಡಿದಂತಾಗಿದೆ.

ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆಗೊಳಗಾಗಿರುವ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅಧಿಕೃತವಾಗಿ ಅನರ್ಹವಾಗಿದೆ. ಈ ಸಂಬಂಧ ವಿಧಾನಸಭೆ ಸಚಿವಾಲಯ ಮಹತ್ವದ ಆದೇಶ ಹೊರಡಿಸಿದೆ.

ಯಾವುದೇ ಜನಪ್ರತಿನಿಧಿ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಯಾವುದೇ ಅಪರಾಧದಲ್ಲಿ ಜೈಲು ಶಿಕ್ಷೆಗೊಳಗಾದರೆ ಶಾಸಕ ಸ್ಥಾನ ಅನರ್ಹಗೊಳ್ಳುತ್ತದೆ. ಇದೀಗ ವಿನಯ್ ಕುಲಕರ್ಣಿ ಪ್ರಕರಣದಲ್ಲೂ ಇದೇ ರೀತಿ ಮಾಡಲಾಗಿದೆ. ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಕಟವಾಗಿ ಇಷ್ಟು ದಿನಗಳ ನಂತರ ಸಚಿವಾಲಯದಿಂದ ಮಹತ್ವದ ಆದೇಶ ಹೊರಬಿದ್ದಿದೆ.

ವಿನಯ್ ಕುಲಕರ್ಣಿ ಶಾಸಕ ಸ್ಥಾನ ಕಳೆದುಕೊಂಡ ಬೆನ್ನಲ್ಲೇ ಈಗ ಕಾಂಗ್ರೆಸ್ ಸಂಖ್ಯಾಬಲ ಒಂದು ಸ್ಥಾನ ಕುಸಿದಿದೆ. ಸದ್ಯಕ್ಕೆ ವಿನಯ್ ಕುಲಕರ್ಣಿ ತಮಗೆ ನೀಡಲಾಗಿರುವ ಶಿಕ್ಷೆ ವಿರುದ್ಧ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿರುವ ಹೊತ್ತಿನಲ್ಲೇ ಈ ಶಾಕ್ ಎದುರಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

600 ಕೋಟಿ ಶ್ರೀಮಂತಿಕೆ, ಸ್ಪುರದ್ರೂಪಿಯಾಗಿದ್ರೂ ಕೇತನ್ ಅಗರ್ವಾಲ್ ಕೊಲ್ಲಲು ಸಿಯಾಗೆ ಹೇಗೆ ಮನಸ್ಸು ಬಂತು

ಕರಾವಳಿ ಮೇಲೆ ಡಿಕೆ ಶಿವಕುಮಾರ್: ಬಿಜೆಪಿ ಭದ್ರಕೋಟೆ ಪಡೆಯಲು ಡಿಕೆಶಿ ಮಾಸ್ಟರ್ ಪ್ಲ್ಯಾನ್

ಜಾಮೀನು ನಿರಾಕರಣೆ ಆದೇಶ ಮಾರ್ಪಾಡು ಕೋರಿ ಮತ್ತೆ ಸುಪ್ರೀಂ ಮೆಟ್ಟಿಲೇರಿದ ನಟ ದರ್ಶನ್‌

ಎಲ್‌ಐಸಿ ಪಾಲಿಸಿ ಹಣದ ಆಸೆಗಾಗಿ ಒಡಹುಟ್ಟಿದವನಿಗೆ ಹೀಗೆ ಮಾಡುವುದಾ

ರಾಜ್ಯವನ್ನೇ ಬೆಚ್ಚಿಬೀಳಿಸಿದ ಕೆಆರ್‌ ಪುರಂ ತ್ರಿಬಲ್ ಮರ್ಡರ್ ಕೇಸ್, ಕೊನೆಗೂ ಪಾಪಿ ಮಗಳು ಅರೆಸ್ಟ್, ಸಿಕ್ಕಿದ್ದೆಲ್ಲಿ ಗೊತ್ತಾ

ಮುಂದಿನ ಸುದ್ದಿ
Show comments