Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕಳೆದ ತಿಂಗಳು ನಟ ಸಂಚಾರಿ ವಿಜಯ್ರನ್ನು ಬಲಿ ತೆಗೆದುಕೊಂಡ ಅಪಘಾತದ ಕುರಿತು ಬೈಕ್ ಮುಂಬದಿ ಸವಾರ ವಿಜಯ್ ಸ್ನೇಹಿತ ನವೀನ್ ಶುಕ್ರವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಸ್ಪತ್ರೆಯಿಂದ ಡಿಸ್ಟಾರ್ಜ್ ಆದ ಬಳಿಕ ಜಯನಗರ ಪೊಲೀಸ್ ಠಾಣೆಗೆ ಆಗಮಿಸಿ ಹೇಳಿಕೆ ನೀಡಿರುವ ನವೀನ್, ಅಪಘಾತದ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ. ಜಯನಗರ ಟ್ರಾಫಿಕ್ ಪೊಲೀಸರು ಹೇಳಿಕೆ ದಾಖಲಿಸಿಕೊಂಡು ಠಾಣಾ ಜಾಮೀನಿನ ಮೇಲೆ ನವೀನ್ ಬಿಡುಗಡೆ ಮಾಡಿದ್ದು, ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.
ಅಫಘಾತ ನೆಡೆದ ಜೂನ್ 12 ರ ರಾತ್ರಿ, ಸಂಚಾರಿ ವಿಜಯ್ ಮತ್ತು ಸ್ನೇಹಿತರ ಮನೆಯಲ್ಲಿ ಸೇರಿದ್ದರಂತೆ. ಕೋವಿಡ್ ಕಿಟ್ ಮತ್ತು ಇತರ ಆಹಾರ, ಸಾಮಗ್ರಿಗಳ ಸಹಾಯ ಬಗ್ಗೆ ವಿಜಯ್ ಮತ್ತು ಸ್ನೇಹಿತರಿಂದ ಚರ್ಚೆ ನೆಡೆದಿತ್ತಂತೆ. ಫುಡ್ ಕಿಟ್, ಔಷಧ ಸೇರಿ ಸಹಾಯಹಸ್ತ ಚಾಚಲು ನಿರ್ಧಾರ ಮಾಡಿದ್ದೆವು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಚರ್ಚೆಮಾಡುತ್ತಿದ್ದಾಗ ಮನೆಯಿಂದ ಪತ್ನಿಯ ಫೋನ್ ಬಂತು. ಪತ್ನಿಗೆ ಮಾತ್ರೆ ತರಲು ಹೊರಟೆ, ದ್ವಿಚಕ್ರ ವಾಹನದಲ್ಲಿ ಹತ್ತಿರದ ಮೆಡಿಕಲ್ ಸ್ಟೋರ್ಗೆ ಹೊರಟೆವು. ಈ ವೇಳೆ ತಾನೂ ಬರುವುದಾಗಿ ವಿಜಯ್ ಹೇಳಿದ ಮಾತ್ರೆಗಳನ್ನ ತಗೊಂಡು ವಾಪಸ್ ಬರಬೇಕಾದರೆ ಬೈಕ್ ಅಪಘಾತ ಸಂಭವಿಸಿತು. ಸ್ಕಿಡ್ ಆದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಯಿತು. ಸ್ಕಿಡ್ ಆಗಿದ್ದರಿಂದ ಬೈಕ್ ಬಿದ್ದದ್ದು ಎಂದು ಹೇಳಿದ್ದಾರೆ.