Publish Date: Sat, 22 Jul 2023 (14:47 IST)
Updated Date: Sat, 22 Jul 2023 (13:53 IST)
ವಿಧಾನಸೌದದ ಬಳಿ ಬಿಜೆಪಿ ನಾಯಕರ ಪ್ರತಿಭಟನೆ ನಡೆಸಿದ್ದು,10 ಬಿಜೆಪಿ ಶಾಸಕರ ಅಮಾನತು ಹಿನ್ನೆಲೆ ಹಾಗೂ ಐಎಎಸ್ ಅಧಿಕಾರಿಗಳ ದುರ್ಬಳಕೆ ಸರ್ಕಾರ ಮಾಡಿಕೊಳ್ತಿದೆ.ಭ್ರಷ್ಟ ಸರ್ಕಾರ,ಸಂವಿಧಾನ ವಿರೋಧಿ ಸರ್ಕಾರ ಎಂದು ಬಿಜೆಪಿ ನಾಯಕರು ಧಿಕ್ಕಾರ ಕೂಗುತ್ತಿದ್ದಾರೆ.ಪ್ರತಿಭಟನೆಯಲ್ಲಿ ಶಾಸಕರಾದ ಸುರೇಶ್ ಕುಮಾರ್,ವಿಜಯೇಂದ್ರ,ಚನ್ನಬಸಪ್ಪ, ಮಾಜಿ ಸಚಿವರಾದ ಪ್ರಭು ಚೌಹಾಣ್,ಎಮ್ ಎಲ್ ಸಿ ರವಿಕುಮಾರ್, ಅರುಣ್ , ತೇಜಸ್ವಿನಿ ರಮೇಶ್, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.