Webdunia - Bharat's app for daily news and videos

Install App

ಮೊದಲು ವಿದ್ಯಾರ್ಥಿಗಳು 25 ದಿನ ಉಪವಾಸ ಕೂರಲಿ, ಬಳಿಕ ಲಾಠಿ ಚಾರ್ಜ್ ಆಗಲಿ, ಆಮೇಲೆ ರಾಜೀನಾಮೆ ಕೊಡ್ತೀನಿ: ಪ್ರಿಯಾಂಖ್ ಖರ್ಗೆ Video

ಕೃಷ್ಣವೇಣಿ ಕೆ
ಸೋಮವಾರ, 3 ಆಗಸ್ಟ್ 2026 (15:19 IST)
ಬೆಂಗಳೂರು: ಮೊದಲು ವಿದ್ಯಾರ್ಥಿಗಳು 25 ದಿನ ಉಪವಾಸ ಸತ್ಯಾಗ್ರಹ ಕೂರಲಿ, ಬಳಿಕ ಲಾಠಿ ಚಾರ್ಜ್ ಆಗಲಿ ಆಮೇಲೆ ರಾಜೀನಾಮೆ ಕೊಡ್ತೀನಿ.. ಹೀಗಂತ ಗೃಹಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ಹೇಳಿದ್ದಾರೆ.

ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಆದ ಗೊಂದಲಗಳ ಬಗ್ಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಶ್ನೆ ಪತ್ರಿಕೆ ವಿತರಣೆಯಲ್ಲಿ ವಿಳಂಬ, ಒಎಮ್ಆರ್ ಶೀಟ್ ಗಳ ಗೊಂದಲಗಳಿಂದ ಹಲವು ಅಭ್ಯರ್ಥಿಗಳು ಪರೀಕ್ಷೆಯಿಂದ ಹೊರನಡೆಯಬೇಕಾದ ಪರಿಸ್ಥಿತಿ ಬಂದಿತ್ತು.

ಇದರಿಂದ ಸಾಕಷ್ಟು ಜನ ನಿರಾಶೆಗೊಳಗಾಗಿದ್ದರು. ತಮ್ಮ ಶ್ರಮವೆಲ್ಲಾ ವ್ಯರ್ಥವಾಯಿತು ಎಂದು ಹತಾಶೆಯಿಂದ ಕೆಲವರು ಮನೆಗೆ ಮರಳಬೇಕಾಯಿತು. ಈ ಘಟನೆ ಬಗ್ಗೆ ಗೃಹಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಕೆಲವು ಗೊಂದಲಗಳು, ಸಂವಹನ ಕೊರತೆಯಿಂದ ಅಭ್ಯರ್ಥಿಗಳ ನಡುವೆ ಒಎಂಆರ್ ಶೀಟ್ ಮತ್ತು ಕ್ವೆಶ್ಚನ್ ಬ್ಯಾಂಕ್ ಸೀರಿಯಲ್ ನಂಬರ್ ಒಂದೇ ಆಗಿರಬೇಕು ಎಂದು ಗೊಂದಲಗಳಾಗಿತ್ತು. ಆದರೆ ಇದು ಅಗತ್ಯವಿರಲಿಲ್ಲ.  ಕೆಲವರು ಇದು ಅಗತ್ಯ ಎಂದುಕೊಂಡು ಹೊರಗೆ ಹೋದರು. ಒಮ್ಮೆ ಹೊರಗೆ ಹೋದ ಮೇಲೆ ಅವರಿಗೆ ಒಳಗೆ ಬರಲು ಆಗಲಿಲ್ಲ. ಇದಕ್ಕೆ ಏನು ಮಾಡೋಣ ಎಂದು ನೋಡೋಣ.

ಒಂದು ವೇಳೆ ನೀವು ಗಲಾಟೆ ಮಾಡಿದರೆ ಕಾನೂನು ಕೈಗೆತ್ತಿಕೊಂಡರೆ ಏನು ಮಾಡಲು ಆಗುತ್ತೆ? ನಾವು ತಕ್ಕ ಕ್ರಮ ಕೈಗೊಳ್ಳಲೇಬೇಕಾಗುತ್ತದೆ’ ಎಂದಿದ್ದಾರೆ. ಬಳಿಕ ದೆಹಲಿ ಗಲಭೆ ಉಲ್ಲೇಖಿಸಿ ‘ಅವರು ಮೊದಲು 25 ದಿನ ಉಪವಾಸ ಸತ್ಯಾಗ್ರಹ ಮಾಡಲಿ, ಬಳಿಕ ಲಾಠಿ ಚಾರ್ಜ್ ಆಗಲಿ ನಂತರ ನಾನು ರಾಜೀನಾಮೆ ಕೊಡ್ತೇನೆ. ನನ್ನ ರಾಜೀನಾಮೆ ಕೇಳುವವರು, ಪಿಎಸ್ಐ ಹಗರಣ ಆದಾಗ ಬೊಮ್ಮಾಯಿ, ಅರಗ ಜ್ಞಾನೇಂದ್ರ ಯಾಕೆ ರಾಜೀನಾಮೆ ನೀಡಲಿಲ್ಲ. ನಿನ್ನೆ  ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು ಅದರಲ್ಲಿ ಕೆಲವೇ ಜನರಿಗೆ ಮಾತ್ರ ಸಮಸ್ಯೆಯಾಗಿದ್ದಷ್ಟೇ’ ಎಂದು ವ್ಯಂಗ್ಯ ಮಾಡಿದ್ದಾರೆ.

pic.twitter.com/47jrDciJOH

 

— News Arena India (@NewsArenaIndia) August 3, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾವೇರಿ ನೀರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ತಮಿಳುನಾಡು ರೈತರು ಯಾವಾ ರೀತಿ ಪ್ರತಭಟನೆ ನಡೆಸಿದ್ರು ಗೊತ್ತಾ

ಪಕ್ಷಕ್ಕೆ ಸವಾಲು ಹಾಕಿದವರಿಗೆ ಸಚಿವ ಸ್ಥಾನದ ಭಾಗ್ಯ: ಮಂತ್ರಿಗಿರಿ ಕೈತಪ್ಪಿದಕ್ಕೆ ಕೆರಳಿ ಕೆಂಡವಾದ ತನ್ವೀರ್ ಸೇಠ್

Video: ಮದುಮಗನ ದಿರಿಸಿನಲ್ಲಿ ಮೆಟ್ರೋ ಏರಿದ ಮದುಮಗ: ಕಾರಣ ನಿಜಕ್ಕೂ ಶಾಕಿಂಗ್

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಚಂದನ್ ಶೆಟ್ಟಿ ಜೊತೆ ಭರ್ಜರಿ ಸ್ಟೆಪ್ ಹಾಕಿದ ಸಚಿವ ಕೃಷ್ಣಭೈರೇಗೌಡ: Video

ಮುಂದಿನ ಸುದ್ದಿ
Show comments