Publish Date: Thu, 09 Jul 2026 (11:17 IST)
Updated Date: Thu, 09 Jul 2026 (11:23 IST)
ಬೆಂಗಳೂರು: ಕರ್ನಾಟಕ ಹೈಕೋರ್ಟ್ ನಲ್ಲಿ ಅಣ್ಣನ ಬದಲು ತಮ್ಮನನ್ನು ಅರೆಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಡ್ಜ್ ಎಂ ನಾಗಪ್ರಸನ್ನ ನೀಡಿದ ತೀರ್ಪು ನಿಮಗೂ ಪಾಠವಾಗಬಹುದು.
ನಮ್ಮ ದೇಶದ ಕಾನೂನಿನಲ್ಲಿ ವಿನಾಕಾರಣ ಯಾರನ್ನೋ ಅರೆಸ್ಟ್ ಮಾಡುವಂತಿಲ್ಲ. ಒಬ್ಬ ತಪ್ಪು ಮಾಡಿದ್ದಾರೆಂದು ಮನೆಯವರನ್ನು ಅರೆಸ್ಟ್ ಮಾಡುವಂತಿಲ್ಲ. ಆದರೆ ಇಲ್ಲೊಂದು ಪ್ರಕರಣದಲ್ಲಿ ಪೊಲೀಸರಿಂದ ಇಂತಹದ್ದೊಂದು ಪ್ರಮಾದವಾಗಿತ್ತು.
ಓರ್ವ ಹುಡುಗಿಗೆ ಮದುವೆಯಾಗುವುದಾಗಿ ನಂಬಿಸಿ ಓರ್ವ ವ್ಯಕ್ತಿ ವಂಚಿಸಿದ್ದ. ಆದರೆ ಪೊಲೀಸರು ಆತ ಸಿಗಲಿಲ್ಲವೆಂದು ಆತನ ಸಹೋದರನನ್ನು ಅರೆಸ್ಟ್ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಸ್ಟಿಸ್ ನಾಗಪ್ರಸನ್ನ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವೇನು ಪೊಲೀಸರಾ ಏನು? ಮದುವೆಯಾಗುವುದಾಗಿ ನಂಬಿಸಿ ಹುಡುಗಿಗೆ ಮೋಸ ಮಾಡಿದ್ದಾನೆಂದು ಹೇಳಲಾಗುತ್ತಿರುವ ವ್ಯಕ್ತಿಯ ಬದಲು ಆತನ ಸಹೋದರನನ್ನು ಹೇಗೆ ಬಂಧಿಸುತ್ತೀರಿ? ಅವನ ತಪ್ಪು ಏನಿದೆ ಇದರಲ್ಲಿ? ಅರೆಸ್ಟ್ ಆದರೆ ಅದರ ಪರಿಣಾಮ ಏನಾಗುತ್ತದೆ ಗೊತ್ತಾ? ಜೀವನ ಪರ್ಯಂತ ಆತ ಮಾಡದ ತಪ್ಪಿಗೆ ಅರೆಸ್ಟ್ ಆಗಿದ್ದ ಎಂಬ ಹಣೆ ಪಟ್ಟಿ ಹೊರಬೇಕಾಗುತ್ತದೆ. ಇದು ಯಾವ ನ್ಯಾಯ? ಅಣ್ಣ ಸಿಗಲಿಲ್ಲವೆಂದು ತಮ್ಮನನ್ನು ಅರೆಸ್ಟ್ ಮಾಡಕ್ಕಾಗುತ್ತಾ? ಇದಕ್ಕೆ ನೀವು ಬೆಲೆ ತೆರಬೇಕಾಗುತ್ತದೆ. ಈ ಕೇಸ್ ರದ್ದುಗೊಳಿಸುವುದಲ್ಲದೆ ನಿಮ್ಮ ಪಾಕೆಟ್ ನಿಂದ ಆತನಿಗೆ 1 ಲಕ್ಷ ರೂ. ಪರಿಹಾರ ಕೊಡಬೇಕು. ಅಲ್ಲದೆ ಈ ಪ್ರಕರಣದಲ್ಲಿ ಇಲಾಖೆ ಮಟ್ಟದ ತನಿಖೆಗೆ ಆದೇಶಿಸುತ್ತಿದ್ದೇನೆ ಎಂದು ನ್ಯಾಯಾಧೀಶರು ಹೇಳುತ್ತಾರೆ.
ಇದೇ ರೀತಿ ಸುಳ್ಳು ಪ್ರಕರಣ ದಾಖಲಿಸಿದ್ದರೆ ಕೋರ್ಟ್ ನಲ್ಲಿ ಪ್ರಶ್ನಿಸುವ ಹಕ್ಕು ನಮಗೆ ಕಾನೂನಿನಲ್ಲಿ ನೀಡಲಾಗಿದೆ ಎಂಬ ಪಾಠ ಈ ಪ್ರಕರಣ ಹೇಳಿಕೊಡುತ್ತದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ