Publish Date: Sat, 25 Jul 2026 (10:23 IST)
Updated Date: Sat, 25 Jul 2026 (10:26 IST)
ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಕಾಮುಕನಿಗೆ ಯುವತಿಯ ಧೈರ್ಯ ಹಾಗೂ ಬಸ್ ಚಾಲಕನ ತಕ್ಷಣದ ಸಮಯಪ್ರಜ್ಞೆಯಿಂದ ತಕ್ಕ ಶಾಸ್ತಿಯಾಗಿದೆ. ಮೌನವಾಗಿರಲು ನಿರಾಕರಿಸಿ ಗಟ್ಟಿಯಾಗಿ ಧ್ವನಿ ಎತ್ತಿದ ಯುವತಿಯ ಧೈರ್ಯ ಮತ್ತು ಆಕೆಗೆ ಬೆಂಬಲವಾಗಿ ನಿಂತು ಕಾಮುಕನಿಗೆ 'ಫ್ಲೈಯಿಂಗ್ ಕಿಕ್' ನೀಡಿದ ಬಿಎಂಟಿಸಿ ಚಾಲಕ ಪ್ರವೀಣ್ ಅವರ ಸಾಹಸಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಸನ್ನಿವೇಶವು 500D ಮಾರ್ಗದ ಬಿಎಂಟಿಸಿ ಬಸ್‌ನಲ್ಲಿ ಹೆಬ್ಬಾಳದಿಂದ ಮಾನ್ಯತಾ ಟೆಕ್ ಪಾರ್ಕ್ ಕಡೆಗೆ ಚಲಿಸುತ್ತಿದ್ದಾಗ ನಡೆದಿದೆ.
ಯುವತಿಯ ದಿಟ್ಟ ಪ್ರತಿಭಟನೆ: ಬಸ್‌ನಲ್ಲಿದ್ದ ವಿಕೃತಕಾಮಿಯೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಆದರೆ, ಅದಕ್ಕೆ ಹೆದರಿ ಮೌನವಾಗಿರದೆ ಆ ಯುವತಿ ತಕ್ಷಣವೇ ಆತನ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿ ಪ್ರತಿಭಟಿಸಿದ್ದಾಳೆ.
ಚಾಲಕ ಪ್ರವೀಣ್ ಸಮಯಪ್ರಜ್ಞೆ: ಯುವತಿ ಕಿರುಚಾಡಿದ್ದನ್ನು ಗಮನಿಸಿದ ತಕ್ಷಣ ಬಸ್ ಚಾಲಕ ಪ್ರವೀಣ್ ಅವರು ಸುರಕ್ಷಿತವಾಗಿ ಬಸ್ ಬದಿಗೆ ನಿಲ್ಲಿಸಿ, ಕಿರುಕುಳ ನೀಡಿದ ಆರೋಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಸಿಯಲು ಬಂದಾಗ 'ಫ್ಲೈಯಿಂಗ್ ಕಿಕ್': ಚಾಲಕ ಪ್ರವೀಣ್ ಪ್ರಶ್ನಿಸಿದಾಗ, ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು ಚಾಲಕನ ಮೇಲೆಯೇ ಉಗುಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಚಾಲಕ ಪ್ರವೀಣ್, ಸಾರ್ವಜನಿಕರ ರಕ್ಷಣೆಗೆ ನಿಂತು ಆರೋಪಿಗೆ 'ಫ್ಲೈಯಿಂಗ್ ಕಿಕ್' ನೀಡಿ ತಕ್ಕ ಪಾಠ ಕಲಿಸಿದ್ದಾರೆ. ಕಾಮುಕನ ಬಟ್ಟೆ ಬಿಚ್ಚಿಸಿ ಎಗರಿ ಹೊಡೆದು ಬುದ್ಧಿ ಕಲಿಸಿದ್ದಾರೆ. ಇತರೆ ಪ್ರಯಾಣಿಕರೂ ಸಾಥ್ ನೀಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ