Webdunia - Bharat's app for daily news and videos

Install App

ನಿನ್ನ ತಂದೆಗೆ ಊಟ ಹಾಕಿದ್ದೀನಿ ಬಿಡಪ್ಪಾ ಎಂದರೂ ಬಿಡದೇ ಸೀರೆ ಎಳೆದ ಪ್ರಜ್ವಲ್ ರೇವಣ್ಣ

Krishnaveni K
ಬುಧವಾರ, 11 ಸೆಪ್ಟಂಬರ್ 2024 (15:02 IST)
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಾಮಕಾಂಡಗಳು ಒಂದೊಂದೇ ಬಯಲಾಗುತ್ತಿದೆ. ಇದೀಗ ಎಸ್ ಐಟಿ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ 60 ವರ್ಷದ ವೃದ್ಧ ಮಹಿಳೆ ಪ್ರಜ್ವಲ್ ನಿಂದ ಯಾವ ರೀತಿ ಕಿರುಕುಳ ಅನುಭವಿಸಿದ್ದರು ಎಂಬುದು ಉಲ್ಲೇಖ ಆಗಿದೆ.

ಪ್ರಜ್ವಲ್ ವಿರುದ್ಧ ಎಸ್ ಐಟಿ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಸಿದ್ದು, ಆತ ತೋಟದ ಮನೆಯಲ್ಲಿ ಮತ್ತು ಹಲವು ಬಾರಿ 60 ವರ್ಷದ ವೃದ್ಧೆ ಮೇಲೆ ರೇಪ್ ನಡೆಸಿರುವುದು ನಿಜ ಎಂದು ವರದಿ ಸಲ್ಲಿಸಿದೆ. ಒಟ್ಟು 1632 ಪುಟಗಳ ಚಾರ್ಜ್ ಶೀಟ್ ಇದಾಗಿದ್ದು 113 ಸಾಕ್ಷಿಗಳನ್ನು ಎಸ್ ಐಟಿ ತಂಡ ಉಲ್ಲೇಖಿಸಿದೆ.

ಬನ್ನಿಕೋಡ ತೋಟದ ಮನೆಯಲ್ಲಿ ಮೊದಲು ಮಹಿಳೆ ಮೇಲೆ ರೇಪ್ ನಡೆದಿತ್ತು. ಕುಡಿಯಲು ನೀರು ತಂದುಕೊಡಲು ಹೇಳಿದ ಪ್ರಜ್ವಲ್ ಬಾಗಿಲಿನ ಚಿಲಕ ಹಾಕಿದ್ದ. ಮಹಿಳೆ ಬಾಗಿಲು ತೆಗೆಯಣ್ಣ ಎಂದಾಗ ಬಿಡದೇ ‘ಸೀರೆ ಮತ್ತು ಬ್ಲೌಸ್ ತೆಗಿಯೇ, ತೆಗಿಯೇ’ ಎಂದು ಗದರಿಸಿದ್ದಾನೆ.

ಬಳಿಕ ಮಹಿಳೆ ಗೋಗೆರೆದರೂ ಬಿಡದೇ ಆಕೆಯನ್ನು ಮಂಚದಲ್ಲಿ ಬೀಳಿಸಿ ರೇಪ್ ಮಾಡಿದ್ದಾನೆ. ಈ ವೇಳೆ ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದು ಸೆಲ್ಫೀ ವಿಡಿಯೋ ಮಾಡಿಕೊಂಡಿದ್ದಾನೆ. ಇನ್ನೊಮ್ಮೆ ಬಸವನಗುಡಿಯ ಮನೆ ಕ್ಲೀನ್ ಮಾಡಲು ಕರೆಸಿಕೊಂಡು ಇದೇ ಕೃತ್ಯವೆಸಗಿದ್ದಾನೆ. ಒಗೆಯುವ ಬಟ್ಟೆಗಳಿವೆ ರೂಂಗೆ ಬಂದು ತೆಗೆದುಕೊಂಡು ಹೋಗು ಎಂದಿದ್ದಾನೆ. ಒಳಗೆ ಬರಲು ಮಹಿಳೆ ಹಿಂಜರಿದಾಗ ಗದರಿ ಒಳಗೆ ಕರೆಸಿ ಚಿಲಕ ಹಾಕಿ ಮತ್ತೆ ರೇಪ್ ಮಾಡಿದ್ದಾನೆ.

ಈ ವಿಡಿಯೋಗಳನ್ನು ತೋರಿಸಿ ನಿನ್ನ ಮಗನಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಆಗ ಮಹಿಳೆ ನಿನ್ನ ತಂದೆ, ತಾತನಿಗೆ ಊಟ ಹಾಕಿದ್ದೇನೆ. ದಯವಿಟ್ಟು ನನ್ನ ಬಿಟ್ಬಿಡಪ್ಪಾ ಎಂದು ಗೋಗೆರಿದ್ದಾಳೆ. ಆದರೂ ಕೇಳದೇ ಪ್ರಜ್ವಲ್ ಮೃಗೀಯ ವರ್ತನೆ ತೋರಿದ್ದಾನೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ: ಸಾಧನಾ ಸಮಾವೇಶಕ್ಕೆ ಆರ್‌ ಅಶೋಕ್ ಆಕ್ರೋಶ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ವರಸೆಯೇ ಬದಲಿಸಿದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments