Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಮಗ್ರ ಕನ್ನಡಿಗರ ಏಳಿಗೆ, ಕನ್ನಡಿಗರ ಅಭಿವೃದ್ಧಿ , ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಕನ್ನಡಿಗರ ಉದ್ಯೋಗಕ್ಕಾಗಿ ಒತ್ತಾಯಿಸಿ ಮಂಗಳ ವಾದ್ಯ ಸಮ್ಮೇಳನ ನುಡಿಸುವ ಮೂಲಕ ವಿನೂತನ ವಿಶೇಷ ಕಾರ್ಯಕ್ರಮ ವನ್ನು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಡೆಸಿದರು ಅಲ್ಲದೆ ಸರೋಜಿನಿ ಮಹಿಷಿ ವರದಿ ಜಾರಿ ಆಗಬೇಕು, ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತನಾಡಬೇಕು, ಪರಭಾಷೆ ದಬ್ಬಾಳಿಕೆ ತಪ್ಪಿಸಬೇಕು, ಬ್ಯಾಂಕ್ ಗಳಲ್ಲಿ ಕನ್ನಡ ಬಳಕೆ ಆಗಲೇ ಬೇಕು ಹೀಗೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ವಾಗ್ದಾಳಿ ಮಾಡುವ ಮೂಲಕ ಗುಡುಗಿದರು