Webdunia - Bharat's app for daily news and videos

Install App

ಮುದ್ದೆ ಮಾರಾಟ ಮಾಡುವ ಮೂಲಕ ವಿಭಿನ್ನ ಹೋರಾಟ ಮಾಡಿದ ವಾಟಾಳ್

Webdunia
ಶುಕ್ರವಾರ, 4 ಆಗಸ್ಟ್ 2023 (21:15 IST)
ದಿನಬಳಕೆ ವಸ್ತುಗಳ ದರ ಏರಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹೋಟೆಲ್ ಗಳಲ್ಲಿ ಊಟ, ತಿಂಡಿಗಳ ಬೆಲೆಯನ್ನು ಏರಿಸುವ ಮೂಲಕ ಗ್ರಾಹಕರಿಗೆ ಹೋಟಲ್ ಗಳು ಶಾಕ್ ನೀಡಿವೆ. ಇನ್ನು ಊಟ, ತಿಂಡಿ ದರ ಏರಿಕೆ ಹಿನ್ನೆಲೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕನ್ನಡಪರ ಸಂಘಟನೆ ಹೊರಾಟಗಾರ  ವಾಟಾಳ್ ನಾಗರಾಜ್ ಹೋಟೆಲ್ ಸಂಘದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
 
 ಮೆಜೆಸ್ಟಿಕ್ ನಲ್ಲಿ 1 ರೂಪಾಯಿ ಮುದ್ದೆ ಮಾರುವ ಮೂಲಕ ದರ ಏರಿಕೆಯ ಬಿಸಿ ವಿರುದ್ಧ ವಾಟಾಳ್ ನಾಗರಾಜ್ ಸಮರ ಸಾರಿದ್ದಾರೆ.ಇನ್ನೂ ಈ ಬಗ್ಗೆ ಮಾತನಾಡಿ ಹೋಟೆಲ್ಗಳಲ್ಲಿ ಊಟ, ತಿಂಡಿಗಳ ಬೆಲೆ ಏರಿಕೆ ಮಾಡಿರುವುದು ಖಂಡನೀಯವಾಗಿದೆ. ಇದರಿಂದ ಹೋಟಲ್ ಗಳಲ್ಲಿ ಊಟ ಮಾಡುವ ಜನರಿಗೆ ತುಂಬಾ ಕಷ್ಟ ಆಗುತ್ತಿದೆ. ದರ ಏರಿಕೆ  ಮಾಡಿರೊದನ್ನೂ ಕಡಿಮೆ ,ಮಾಡಬೆಕು, ಆದ್ದರಿಂದ ನಾವು ಇಂದು 1 ರೂಪಾಯಿಗೆ ಮುದ್ದೆ ಮಾರುವ ಮೂಲಕ ವಿನೂತನ ಪ್ರತಿಭಟನೆ ಮಾಡುತ್ತಿದ್ದೇವೆ,. ಹಾಗೆಯೇ  ಮದ್ಯಪಾನ ಪ್ರಿಯರಿಂದಲ್ಲೆ ಸರ್ಕಾರ ನಡೆಯುತ್ತಿದೆ. ಆದರೆ ಎಣ್ಣೆ ದರ ಜಾಸ್ತಿ ಮಾಡಿ ನಮಗೇ ಅನ್ಯಾಯ ಮಾಡಿದ್ದಾರೆ. ನಮಗಾಗಿಯೂ ಪ್ರತಿಭಟನೆ ಮಾಡಿ ಅಂತಾ ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಮದ್ಯ ಪ್ರಿಯರಿಗಾಗಿ ಮುಂದಿನ ವಾರ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡೀಪ್‌ಫೇಕ್: ಕ್ಷಮೆಯಾಚಿಸಿದ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್‌

ಭ್ರಷ್ಟಾಚಾರ ಹಗರಣಗಳ ಸಿಬಿಐ ತನಿಖೆಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ

ಅಮಿತ್ ಶಾ ಮುಖ ಮರೆಮಾಚಿ ಬದುಕುತ್ತಿದ್ದಾರೆ: ರಾಹುಲ್ ಗಾಂಧಿ

ಜಾರ್ಖಂಡ್ ವಿದ್ಯಾರ್ಥಿ ಪ್ರತಿಭಟನೆ: ಸೋನಮ್ ವಾಂಗ್ಚುಕ್ ಕರೆ ಬರುತ್ತಿದ್ದ ಹಾಗೇ ಉಪವಾಸ ಸತ್ಯಾಗ್ರಹ ನಿಲ್ಲಿಸಿದ ದೇವೇಂದ್ರ ನಾಥ್

Karnataka Weather:ಮುಂದಿನ ಈ ಭಾಗದಲ್ಲಿ ಭಾರೀ ಮಳೆ, ಯೆಲ್ಲೂ ಅಲರ್ಟ್‌ ಘೋಷಿಸಿದ ಜಿಲ್ಲೆಗಳ ಮಾಹಿತಿ

ಮುಂದಿನ ಸುದ್ದಿ
Show comments