Publish Date: Tue, 27 Jun 2023 (20:55 IST)
Updated Date: Tue, 27 Jun 2023 (20:57 IST)
ನಗರದಲ್ಲಿ ಸಂಜೆ ಆಗ್ತಿದಂತೆ ಇಂದು ಧಾರಾಕಾರವಾಗಿ ಮಳೆ ಸುರಿದಿದೆ.ಮಳೆಯಿಂದ ಹಲವೆಡೆ ಟ್ರಾಫಿಕ್ ಜಾಮ್ ಸಂಭವಿಸಿದೆ.ನಗರದ ಮಲೇಶ್ವರಂ, ಕೆ ಆರ್ ಪುರಂ ,ಯಶವಂತಪುರ, ಮಾರ್ಕೆಟ್ ,ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಾಗಿದೆ.ಮಳೆಯಿಂದ ಜನಜೀವನ ಅಸ್ತವ್ಯಸ್ಥವಾಗಿದೆ.ವಾಹನಸವಾರರಂತೂ ಮಳೆಯ ನಡುವೆ ಮನೆ ತಲುಪಲು ಹೈರಾಣಾಗಿದ್ದಾರೆ. ಟ್ರಾಫಿಕ್ ನಲ್ಲಿ ಗಂಟೆಗಟ್ಟಲೇ ಸಿಲುಕಿಕೊಂಡು ವಾಹನಸವಾರರು ಪರದಾಟ ನಡೆಸಿದ್ದಾರೆ