Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯುವಕನ ಹೊಟ್ಟೆಯಲ್ಲಿ ಗರ್ಭಕೋಶ ಪತ್ತೆ

ಯುವಕನ ಹೊಟ್ಟೆಯಲ್ಲಿ ಗರ್ಭಕೋಶ ಪತ್ತೆ
ಕೋಲಾರ , ಗುರುವಾರ, 23 ಮಾರ್ಚ್ 2017 (12:16 IST)
ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾದ ಯುವಕನ ಹೊಟ್ಟೆಯಲ್ಲಿ ಗರ್ಭಕೋಶ ಪತ್ತೆಯಾಗಿರುವ ಘಟನೆ ಕೋಲಾರ ಪ್ರಿಯಾ ನರ್ಸಿಂಗ್ ಹೋಮ್`ನಲ್ಲಿ ಬೆಳಕಿಗೆ ಬಂದಿದೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಂಧ್ರ ಮೂಲದ 22 ವರ್ಷದ ಯುವಕ ಮುರುಗೇಶ್ ಕೋಲಾರದ ಪ್ರಿಯಾ ನರ್ಸಿಂಗ್ ಹೋಮ್`ಗೆ ದಾಖಲಾಗಿದ್ದರು. ಈ ಸಂದರ್ಭ ತಪಾಸಣೆ ವೇಳೆ ಹೊಟ್ಟೆಯಲ್ಲಿ ಗರ್ಭಕೋಶ ಪತ್ತೆಯಾಗಿದೆ. ಜಗತ್ತಿನಲ್ಲಿ 10 ಲಕ್ಚಕ್ಕೆ ಒಬ್ಬರಲ್ಲಿ ಪತ್ತೆಯಾಗುವ ಲಕ್ಷಣ ಇದು ಎನ್ನಲಾಗಿದೆ.

ಕೆಲವೊಮ್ಮೆ ತಾಯಿ ಗರ್ಭ ಧರಿಸಿದ್ದಾಗ ಆಗುವ ಕೆಲವು ವ್ಯತ್ಯಾಸಗಳಿಂದ ಈ ರೀತಿ ಮಕ್ಕಳ ಹೊಟ್ಟೆಯಲ್ಲಿ ಗರ್ಭಕೋಶ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು.

ವೈದ್ಯ ಸುಧೀರ್ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ನಡೆಸಿ ಗರ್ಭಕೋಶ ಹೊರ ತೆಗೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾರಕ್ಕೇರಿದ್ದ ಶ್ರೀರಾಮುಲು-ಕರುಣಾಕರ ರೆಡ್ಡಿ ಶೀತಲ ಸಮರ