ಸಂಸದ ಶ್ರೀರಾಮುಲು ಮತ್ತು ಮಾಜಿ ಸಚಿವ ಕರುಣಾಕರ ರೆಡ್ಡಿ ನಡುವಿನ ಶೀತಲ ಸಮರ ತಾರಕಕ್ಕೇರಿದೆ. ನಗರದ ಸುಷ್ಮಾ ಸ್ವರಾಜ್ ಕಾಲೋನಿಯಲ್ಲಿ ಸೂಚನಾ ಫಲಕವನ್ನ ಹಾಕಲಾಗಿದ್ದು, ಇದರಲ್ಲಿ ಬರುವ 2.85 ಎಕರೆ ಜಮೀನು ಕರುಣಾಕರ ರೆಡ್ಡಿಯವರಿಗೆ ಸೇರಿದ್ದಾಗಿದ್ದು, ಇದರ ಮೇಲೆ ಸಿವಿಲ್ ನಾಯಾಲಯದಲ್ಲಿ ಸಿವಿಲ್ ದಾವೆ ಇದ್ದು, ಸದರಿ ನ್ಯಾಯಾಲಯ ಇಲ್ಲಿನ ಖಾಲಿ ನಿವೇಶನಗಳನ್ನ ಪರಭಾರೆ ಮಾಡದಂತೆ ಆದೇಶಿಸಿರುತ್ತದೆ. ಹೀಗಾಗಿ, ಈ ನಿವೇಶನಗಳನ್ನ ಯಾರೂ ಖರೀದಿಸಬಾರದೆಂದು ಫಲಕದಲ್ಲಿ ಸೂಚಿಸಲಾಗಿದೆ.
ಈ ಕುರಿತು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕರುಣಾಕರ ರಡ್ಡಿ, ಸಹೋದರ ಸೋಮಶೇಖರರೆಡ್ಡಿ ಸಂಧಾನ ನಡೆಸುವುದಾಗಿ ಹೇಳಿದ್ದರು. ಆದರೆ, ಈ ಬಗ್ಗೆ ಯಾರೊಬ್ಬರೂ ನನ್ನನ್ನ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.
ಮೇಲ್ನೋಟಕ್ಕೆ ಕರುಣಾಕರರೆಡ್ಡಿ ಮತ್ತು ಶ್ರೀರಾಮುಲು ನಡುವಿನ ವಿವಾದದಂತೆ ಕಂಡುಬಂದರೂ ನಿಜವಾದ ಶೀತಲ ಸಮರ ನಡೆಯುತ್ತಿರುವುದು ಜನಾರ್ದನರೆಡ್ಡಿ ಮತ್ತು ಕರುಣಾಕರ ರೆಡ್ಡಿ ನಡುವೆ ಎಂದೇ ಹೇಳಲಾಗುತ್ತಿದೆ. ಈ ಹಿಂದೆ ಶ್ರೀರಾಮುಲು ಬಿಜೆಪಿ ಪಕ್ಷ ತೊರೆದಾಗಲೂ ಬಿಜೆಪಿಯಲ್ಲೇ ಉಳಿದಿದ್ದ ಕರುಣಾಕರ ರೆಡ್ಡಿ ಬಿಎಸ್`ಆರ್ ಪಕ್ಷದ ವಿರುದ್ಧ ಸ್ಪರ್ಧಿಸಿದ್ದರು.