Publish Date: Tue, 02 Jul 2019 (11:50 IST)
Updated Date: Tue, 02 Jul 2019 (11:53 IST)
ಕಲಬುರಗಿ : ಸಿದ್ದರಾಮಯ್ಯ ತೆರೆಮರೆಯಲ್ಲಿ ಸರ್ಕಾರಕ್ಕೆ ಧಕ್ಕೆ ತರುತ್ತಿಲ್ಲ ಎಂದು ಸಿದ್ದರಾಮಯ್ಯ ಪರ ಸಚಿವ ಯು.ಟಿ.ಖಾದರ್ ಬ್ಯಾಟ್ ಬೀಸಿದ್ದಾರೆ.
ಮೈತ್ರಿ ಸರ್ಕಾರ ಕೆಡವಲು ಸಿದ್ದರಾಮಯ್ಯ ತೆರೆಮರೆಯಲ್ಲಿ ಕಸರತ್ತು ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದ ಹಿನ್ನಲೆಯಲ್ಲಿ ಈ ಕುರಿತು ಮಾತನಾಡಿದ ಸಚಿವ ಯು.ಟಿ.ಖಾದರ್, ಎಲ್ಲರನ್ನೂ ಸಿದ್ದರಾಮಯ್ಯ ಒಟ್ಟಿಗೆ ಕರ್ಕೊಂಡು ಹೋಗ್ತಿದ್ದಾರೆ. ಅವ್ರು ಸರ್ಕಾರ ಕೆಡವಲು ಮುಂದಾಗಿದ್ದಾರೆ ಅನ್ನೋದು ತಪ್ಪು. ಸಿದ್ದರಾಮಯ್ಯ ತೆರೆಮರೆಯಲ್ಲಿ ಸರ್ಕಾರಕ್ಕೆ ಧಕ್ಕೆ ತರುತ್ತಿಲ್ಲ ಎನ್ನುವುದರ ಮೂಲಕ ಸಿದ್ದರಾಮಯ್ಯ ನವರ ಪರ ನಿಂತಿದ್ದಾರೆ.
ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತೆ. ಪಕ್ಷ ಬಿಟ್ಟು ಹೋದವರು ಕೂಡಾ ನಮ್ಮ ಮಿತ್ರರೇ. ರಾಜಕೀಯ ಸನ್ನಿವೇಶಕ್ಕೂ ಸರ್ಕಾರಕ್ಕೂ ಸಂಬಂಧವವಿಲ್ಲ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಅನೇಕರು ರಾಜೀನಾಮೆ ನೀಡಿದ್ದರು. ಹಾಗಂತ ಅಂದಿನ ಬಿಜೆಪಿ ಸರ್ಕಾರ ಬೀಳಲಿಲ್ಲ. ಅಪರೇಷನ್ ನಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಲ್ಲ ಎಂದು ಅವರು ಹೇಳಿದ್ದಾರೆ.