ಸೂಪರ್ ಸ್ಟಾರ್ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. 11 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯುತ್ತಿದ್ದಾರೆ.
ಉಪೇಂದ್ರ ಹೊಸ ಪಕ್ಷ ಕಟ್ಟುತ್ತಾರಾ..? ಈಗಿರುವ ಯಾವುದಾದರೂ ಪಕ್ಷ ಸೇರುತ್ತಾರಾ..? ಎಂಬ ಎಲ್ಲ ಕುತೂಹಲಗಳಿಗೆ ತೆರೆ ಬೀಳಲಿದೆ. ಈ ಮಧ್ಯೆ, ಪತ್ರಿಕಾಗೋಷ್ಠಿಯಲ್ಲಿ ಉಪೇಂದ್ರ ವೆಬ್ ಸೈಟ್ ಲಾಂಚ್ ಮಾಡಲಿದ್ದು, ಜನರ ಅಭಿಪ್ರಾಯ ಪಡೆಯಲಿದ್ದಾರೆ. ಅದರ ಆಧಾರದ ಮೇಲೆ ಮುಂದುವರೆಯಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಈ ಮಧ್ಯೆ, ರಾಜಕೀಯ ಪರಿಕಲ್ಪನೆ ಕುರಿತಂತೆ ತಮ್ಮದೇ ಆದ ಚಿಂತನೆಯನ್ನೊಳಗೊಂಡ ಆಡಿಯೋ ಕ್ಲಿಪ್ ಒಂದನ್ನ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ